ರವಿ ಶಾಸ್ತ್ರಿ-ಗಂಗೂಲಿ ವೈಮನಸ್ಸಿಗೆ ಕಾರಣವಾಗಿತ್ತಾ 2007 ಬಾಂಗ್ಲಾ ಪ್ರವಾಸ?

First Published 29, Jun 2018, 4:03 PM IST
When Ravi Shastri taught Sourav Ganguly the importance of punctuality
Highlights

ರವಿ ಶಾಸ್ತ್ರಿ ಹಾಗೂ ಸೌರವ್ ಗಂಗೂಲಿ ನಡುವಿನ ಜಟಾಪಟಿ ಕೋಚ್ ಆಯ್ಕೆ ವೇಳೆ ಬಹಿರಂಗವಾಗಿತ್ತು. ಆದರೆ ಇವರ ನಡುವಿನ ಕಿತ್ತಾಟಕ್ಕೆ ಕಾರಣವೇನು ಅನ್ನೋದು ಮಾತ್ರ ರಹಸ್ಯವಾಗಿ ಉಳಿದಿತ್ತು. ಇದೀಗ ಇವರಿಬ್ಬರ ನಡುವಿನ ವೈಮನಸ್ಸಿಗೆ ಕಾರಣ ಬಹಿರಂಗವಾಗಿದೆ. 

ಡಬ್ಲಿನ್(ಜೂ.29): ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರೀ ಹಾಗೂ ಮಾಜಿ ನಾಯಕ, ಪಶ್ಚಿಮ ಬಂಗಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸೌರವ್ ಗಂಗೂಲಿ ನಡುವಿನ ಸಂಭಂಧ ಹಳಸಿರೋದು ಇಂದು ನಿನ್ನೆಯ ವಿಚಾರವಲ್ಲ. ಆದರೆ ಇವರ ಮನಸ್ತಾಪಕ್ಕೆ ಭಾರತ ತಂಡದ 2007ರ ಬಾಂಗ್ಲಾದೇಶ ಪ್ರವಾಸ ಕಾರಣಾವಾಗಿತ್ತಾ ಅನ್ನೋ ಅನುಮಾನಗಳು ವ್ಯಕ್ತವಾಗಿದೆ.

ಅನಿಲ್ ಕುಂಬ್ಳೆ ರಾಜಿನಾಮೆಯಿಂದ ತೆರವಾದ ಭಾರತೀಯ ತಂಡ ಕೋಚ್ ಆಯ್ಕೆ ವಿಚಾರದಲ್ಲೂ ರವಿ ಶಾಸ್ತ್ರಿ ಹಾಗೂ ಸೌರವ್ ಗಂಗೂಲಿ ಜಟಾಪಟಿ ತಾರಕಕ್ಕೇರಿತು. ಆದರೆ ಇವರ ಕಿತ್ತಾಟಕ್ಕೆ ಕಾರಣ ಮಾತ್ರ ಬಹಿರಂಗವಾಗಿಲಿಲ್ಲ. ಇದೀಗ ನಿರೂಪಕ ಗೌರವ್ ಕಪೂರ್ ಜೊತೆಗಿನ ಸಂದರ್ಶನದಲ್ಲಿ ರವಿ ಶಾಸ್ತ್ರಿ ಕೆಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಶಾಸ್ತ್ರಿ ಹೇಳಿಕೆಗೆಗಳು ಮನಸ್ತಾಪದ ಕಾರಣಗಳನ್ನ ತೆರೆದಿಟ್ಟಿದೆ.

2007ರಲ್ಲಿ ನೂತನ ಮ್ಯಾನೇಜರ್ ರವಿ ಶಾಸ್ತ್ರಿ ನೇತೃತ್ವದಲ್ಲಿ ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿತ್ತು. ಭಾರತ ತಂಡದ ಅಭ್ಯಾಸಕ್ಕಾಗಿ ಬೆಳಗ್ಗೆ 9  ಗಂಟೆ ಚಿತ್ತಗೊಂಗ್ ತೆರಳ ಬೇಕಿತ್ತು. ಆದರೆ ಸೌರವ್ ಗಂಗೂಲಿ ಸಮಯ ಮೀರುತ್ತಿದ್ದರೂ ಆಗಮಿಸಲೇ ಇಲ್ಲ.  ಸಮಯದ ವಿಚಾರದಲ್ಲಿ ರವಿ ಶಾಸ್ತ್ರಿ ಯಾರೊಂದಿಗೂ ರಾಜಿಯಾಗುತ್ತಿರಲಿಲ್ಲ. ಹೀಗಾಗಿ ಗಂಗೂಲಿಯನ್ನ ಬಿಟ್ಟು ಟೀಂ ಇಂಡಿಯಾ ಬಸ್‌ನಲ್ಲಿ ಚಿತ್ತಗೊಂಗ್‌ಗೆ ಪ್ರಯಾಣ ಮಾಡಿತು. 

ಸೌರವ್ ಗಂಗೂಲಿ ಸಮಯಕ್ಕೆ ಸರಿಯಾಗಿ ಬಂದಿಲ್ಲ. ಗಂಗೂಲಿ ಅಭ್ಯಾಸಕ್ಕೆ ಬರಬೇಕಾದರೆ ಕಾರಿನಲ್ಲಿ ಬರಲಿ ಎಂದು ರವಿ ಶಾಸ್ತ್ರಿ ಸಮಯದ ಪಾಠ ಹೇಳಿದ್ದರು. 2007ರ ಬಾಂಗ್ಲಾ ಪ್ರವಾಸದ ಕುರಿತು ಈ ವಿಚಾರಗಳನ್ನ ರವಿ ಶಾಸ್ತ್ರಿ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. 

ತಡವಾಗಿ ಆಗಮಿಸಿದ ಗಂಗೂಲಿ ಇದೇ ವಿಚಾರಕ್ಕೆ ರವಿ ಶಾಸ್ತ್ರಿ ಜೊತೆ ಮಾತಿನ ಚಕಮಕಿ ಕೂಡ ನಡೆಸಿದ್ದರು ಎನ್ನಲಾಗಿದೆ.ಗಂಗೂಲಿಯನ್ನ ಬಿಟ್ಟು ಅಭ್ಯಾಸಕ್ಕೆ ತೆರಳು ಸೂಚಿಸಿದ ರವಿ ಶಾಸ್ತ್ರಿ ನಿರ್ಧಾರವೇ ಗಂಗೂಲಿ-ರವಿ ಶಾಸ್ತ್ರಿ ವೈಮನಸ್ಸಿಗೆ ಕಾರಣವಾಗಿತ್ತು ಅನ್ನೋ ಮಾತುಗಳು ಕೇಳಿಬಂದಿದೆ. 

loader