ಮುಂಬೈ(ಜೂನ್.8): ಮುಂಬೈ ಇಂಡಿಯನ್ಸ್  ತಂಡಕ್ಕೆ ಈ ಬಾರಿಯ ಐಪಿಎಲ್ ಹೆಚ್ಚಿನ ಯಶಸ್ಸು ನೀಡಲಿಲ್ಲ.  ಆದರೆ ಆರಂಭಿಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ಗೆ ಹನ್ನೊಂದನೇ ಆವೃತ್ತಿ ಐಪಿಎಲ್ ಸ್ಮರಣೀಯವಾಗಿತ್ತು. ಈ ಬಾರಿ 512 ರನ್ ಸಿಡಿಸಿ, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ 3.2 ಕೋಟಿ ಮೊತ್ತ ಪಡೆದ ಸೂರ್ಯಕುಮಾರ್ ಯಾದವ್ ನ್ಯಾಯ ಸಲ್ಲಿಸಿದ್ದಾರೆ.

11ನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ 3.2 ಕೋಟಿ ರೂಪಾಯಿ ಪಡೆದ ಸೂರ್ಯಕುಮಾರ್ ಆ ದುಡ್ಡನ್ನ ಏನು ಮಾಡಿದರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಐಪಿಎಲ್ ಸ್ಯಾಲರಿಯಲ್ಲಿ ಪೋಷಕರಿಗೆ ಕಾರೊಂದನ್ನ ಗಿಫ್ಟ್ ಆಗಿ ನೀಡಿದ್ದಾರೆ.

ಕಾರು ನೀಡಿ ಭಾವುಕರಾಗಿರುವ ಸೂರ್ಯಕುಮಾರ್ ಯಾದವ್, ಇದಕ್ಕಿಂತ ಸಂತಸದ ಸಂದರ್ಭ ಮತ್ತೊಂದಿಲ್ಲ. ನಾನೀಗ ಈ ಸ್ಥಾನದಲ್ಲಿರಲು ನನ್ನ ಪೋಷಕರೇ ಕಾರಣ ಎಂದಿದ್ದಾರೆ. ಸೂರ್ಯುಕುಮಾರ್ ಯಾದವ್ ಸ್ಪೆಷಲ್ ಗಿಫ್ಟ್‌ಗೆ ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.