ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದಲ್ಲಿ ವೇಗಕ್ಕೆ ಬಟರ್ ಚಿಕನ್ ಮತ್ತು ಮಟನ್ ರೋಲ್ಸ್ ಕಾರಣವಾಗಿತ್ತು. ಆದರೆ ಇದೀಗ ಅದೆಲ್ಲಾ ಬದಲಾಗಿದೆ ಎಂದು ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ ಹೇಳಿದ್ದಾರೆ.

ನವದೆಹಲಿ (ಜ.18): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಬಾಲ್ಯದಲ್ಲಿ ವೇಗಕ್ಕೆ ಬಟರ್ ಚಿಕನ್ ಮತ್ತು ಮಟನ್ ರೋಲ್ಸ್ ಕಾರಣವಾಗಿತ್ತು. ಆದರೆ ಇದೀಗ ಅದೆಲ್ಲಾ ಬದಲಾಗಿದೆ ಎಂದು ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮ ಹೇಳಿದ್ದಾರೆ.

ಹೀಗಾಗಿಯೇ ಕಳೆದ 2 ವರ್ಷಗಳಿಂದ ಕೊಹ್ಲಿ ತಮ್ಮ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ ಎಂದು ಅವರು ಹೇಳಿದರು. ಕ್ರಿಕೆಟ್‌ನೆಕ್ಸ್ಟ್‌ಗೆ ನೀಡಿದ ಸಂದರ್ಶನದ ವೇಳೆ ರಾಜ್‌ಕುಮಾರ್ ಈ ವಿಷಯ ತಿಳಿಸಿದರು. ಕೊಹ್ಲಿ ಬಾಲ್ಯದಲ್ಲಿದ್ದಾಗ ಅವರಿಗೆ ಬಟರ್ ಚಿಕನ್ ಮತ್ತು ಮಟನ್ ರೋಲ್ಸ್ ಪದಾರ್ಥಗಳ ಮೇಲೆ ವ್ಯಾಮೋಹವಿತ್ತು. ಆದರೆ ಈಗ ಕೊಹ್ಲಿ ಡಯೆಟ್ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದರಿಂದ ಇಂತಹ ಆಹಾರಗಳನ್ನು ಸೇವಿಸುತ್ತಿಲ್ಲ ಎಂದರು.