ಕುಸ್ತಿ ಒಕ್ಕೂಟ ಚುನಾವಣೆ: ಬ್ರಿಜ್‌ ಭೂಷಣ್ ಕುಟುಂಬ ಸ್ಪರ್ಧಿಸಲ್ಲ..!

ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ ಜುಲೈ 06ಕ್ಕೆ ನಿಗದಿ
ಅಧ್ಯಕ್ಷ ಸೇರಿ​ದಂತೆ ವಿವಿಧ ಹುದ್ದೆ​ಗ​ಳಿಗೆ ಚುನಾ​ವಣೆ ನಡೆಯಲಿದೆ
 ನಾಮ​ಪತ್ರ ಸಲ್ಲಿ​ಸಲು ಜೂನ್ 23ರಿಂದ 25ರ ವರೆಗೆ ಸಮ​ಯಾ​ವ​ಕಾಶ

WFI elections to be held on July 6 none of Brij Bhushan Sharan Sing family members to contest Kannada News kvn

ನವ​ದೆಹ​ಲಿ(ಜೂ.14):  ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಬಹುನಿರೀಕ್ಷಿತ ಚುನಾವಣೆ ಜುಲೈ 4ರ ಬದಲಾಗಿ ಜುಲೈ 6ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಅಧ್ಯಕ್ಷ ಸೇರಿ​ದಂತೆ ವಿವಿಧ ಹುದ್ದೆ​ಗ​ಳಿಗೆ ಚುನಾ​ವಣೆ ನಡೆ​ಯ​ಲಿದ್ದು, ನಾಮ​ಪತ್ರ ಸಲ್ಲಿ​ಸಲು ಜೂನ್ 23ರಿಂದ 25ರ ವರೆಗೆ ಸಮ​ಯಾ​ವ​ಕಾಶ ನೀಡ​ಲಾ​ಗಿದೆ. ಭಾರತದ ತಾರಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ತುತ್ತಾಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್‌ ಸೇರಿದಂತೆ ಅವರ ಕುಟುಂಬಸ್ಥರು ಯಾರೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿದು ಬಂದಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬ್ರಿಜ್‌ ಕುಟುಂಬ​ಸ್ಥ​ರಿ​ಲ್ಲ: ಡಬ್ಲ್ಯು​ಎ​ಫ್‌​ಐಗೆ ಬ್ರಿಜ್‌ ಈಗಾ​ಗಲೇ 3 ಅವ​ಧಿಗೆ 12 ವರ್ಷ ಅಧ್ಯ​ಕ್ಷ​ರಾ​ಗಿದ್ದು, ಕ್ರೀಡಾ ನಿಯ​ಮ​ಗಳ ಪ್ರಕಾರ ಮತ್ತೊಂದು ಅವ​ಧಿಗೆ ಸ್ಪರ್ಧಿ​ಸು​ವಂತಿಲ್ಲ. ಆದರೆ ಅವರ ಕುಟುಂಬ​ಸ್ಥ​ರಾ​ರಿಗೆ ಈ ಬಾರಿ ಅರ್ಹತೆ ಇದ್ದರೂ ಚುನಾ​ವ​ಣೆ​ಯಲ್ಲಿ ಕಣ​ಕ್ಕಿ​ಳಿ​ಯು​ವು​ದಿಲ್ಲ. ಇತ್ತೀಚೆಗೆ ಒಲಿಂಪಿಕ್ಸ್‌ ಸಂಸ್ಥೆ ಕುಸ್ತಿ ಫೆಡರೇಶನ್‌ನ ಆಡಳಿತವನ್ನು ತಾತ್ಕಾಲಿಕ ಸಮಿತಿಗೆ ಒಪ್ಪಿಸುವ ವರೆಗೂ ಬ್ರಿಜ್‌ರ ಪುತ್ರ ಕರಣ್‌ ಭೂಷಣ್‌ ಡಬ್ಲ್ಯುಎಫ್‌ಐನ ಉಪಾಧ್ಯಕ್ಷರಾಗಿದ್ದರು. ಬ್ರಿಜ್‌ರ ಓರ್ವ ಅಳಿಯ ಆದಿತ್ಯ ಪ್ರತಾಪ್‌ ಸಿಂಗ್‌ ಜಂಟಿ ಕಾರ‍್ಯದರ್ಶಿಯಾಗಿ​ದ್ದರೆ, ಮತ್ತೋರ್ವ ಅಳಿಯ ವಿಶಾಲ್‌ ಸಿಂಗ್‌ ಬಿಹಾರ ಕುಸ್ತಿ ಸಂಸ್ಥೆ ಅಧ್ಯಕ್ಷರಾಗಿ ಕಾರ‍್ಯ​ನಿ​ರ್ವ​ಹಿ​ಸು​ತ್ತಿ​ದ್ದಾರೆ. ಆದರೆ ಈ ಬಾರಿ ಬ್ರಿಜ್‌ರ ಕುಟುಂಬಸ್ಥರು ಯಾರೂ ಸ್ಪರ್ಧಿಸಬಾರದು ಎಂದು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಜೊತೆ ಸಭೆ ವೇಳೆ ಕುಸ್ತಿಪಟುಗಳು ಷರತ್ತು ಹಾಕಿದ್ದರು. ಇದಕ್ಕೆ ಠಾಕೂರ್‌ ಒಪ್ಪಿದ್ದು, ಬ್ರಿಜ್‌ ಕುಟುಂಬ​ಸ್ಥರ ಜೊತೆ ಚರ್ಚಿಸಿ ಚುನಾ​ವಣಾ ಕಣ​ದಿಂದ ಹಿಂದಕ್ಕೆ ಸರಿ​ಯು​ವಂತೆ ಸೂಚಿ​ಸಿ​ದ್ದಾರೆ ಎಂದು ಹೇಳ​ಲಾ​ಗು​ತ್ತಿದೆ.

ಬ್ರಿಜ್‌ ಕೇಸ್‌: 5 ದೇಶ​ದ ಸಿಸಿ​ಟಿವಿಗಳ ಪರಿ​ಶೀ​ಲ​ನೆ!

ಅಗ್ರ ಕುಸ್ತಿ​ಪ​ಟು​ಗ​ಳಿಂದ ಲೈಂಗಿಕ ಕಿರು​ಕುಳ ಆರೋ​ಪ ಎದು​ರಿ​ಸು​ತ್ತಿ​ರುವ ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌​(​ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರುದ್ಧ ದೆಹ​ಲಿ ಪೊಲೀ​ಸರು ತನಿಖೆ ಚುರು​ಕು​ಗೊ​ಳಿ​ಸಿದ್ದು, 5 ದೇಶ​ಗಳ ಸಿಸಿಟಿವಿ ದೃಶ್ಯ​ಗ​ಳನ್ನು ಪರಿ​ಶೀ​ಲಿ​ಸಿ​ದ್ದಾರೆ.

ಬ್ರಿಜ್‌ ವಿರುದ್ಧ ಏಪ್ರಿಲ್‌ ಅಂತ್ಯ​ದಲ್ಲೇ 2 ಎಫ್‌​ಐ​ಆರ್‌ ದಾಖ​ಲಾ​ಗಿದ್ದು, ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಈಗಾ​ಗ​ಲೇ ಇಂಡೋ​ನೇಷ್ಯಾ, ಬಲ್ಗೇ​ರಿಯಾ, ಕಿರ್ಗಿ​ಸ್ತಾನ, ಮಂಗೋ​ಲಿಯಾ ಹಾಗೂ ಕಜ​ಕ​ಸ್ತಾ​ನದಿಂದ ದೆಹ​ಲಿ ಪೊಲೀ​ಸರು ಸಿಸಿ​ಟಿವಿ ದೃಶ್ಯ​ಗ​ಳನ್ನು ತರಿಸಿ ಪರಿ​ಶೀ​ಲನೆ ನಡೆ​ಸಿ​ದ್ದಾರೆ ಎಂದು ತಿಳಿ​ದು​ಬಂದಿದೆ. ಈ 5 ದೇಶ​ಗ​ಳ​ಲ್ಲಿ ಟೂರ್ನಿ ನಡೆ​ದಾಗ ತಮ್ಮ ವಿರುದ್ಧ ಲೈಂಗಿಕ ಕಿರು​ಕುಳ ನಡೆ​ದಿತ್ತು ಎಂದು ಕುಸ್ತಿ​ಪ​ಟು​ಗಳು ಆರೋ​ಪಿ​ಸಿ​ದ್ದರು.

ಭಾರತೀಯ ಕುಸ್ತಿ ಸಂಸ್ಥೆ ಚುನಾವಣೆಗೆ ಡೇಟ್ ಫಿಕ್ಸ್‌..!

ಇನ್ನು, ಘಟ​ನೆಗೆ ಸಂಬಂಧೀಸಿ ಕುಸ್ತಿ​ಪ​ಟು​ಗಳು, ಕೋಚ್‌ಗಳು, ರೆಫ್ರಿ​ಗಳು ಸೇರಿ​ದಂತೆ 200ಕ್ಕೂ ಹೆಚ್ಚು ಮಂದಿಯ ಹೇಳಿ​ಕೆ​ಯನ್ನು ಪೊಲೀ​ಸರು ದಾಖ​ಲಿ​ಸಿ​ದ್ದಾರೆ. ಅಲ್ಲದೇ ಆರೋ​ಪಕ್ಕೆ ಸಂಬಂಧಿ​ಸಿ​ದಂತೆ ಕುಸ್ತಿ​ಪ​ಟುಗಳು ಫೋಟೋ, ಆಡಿ​ಯೋ​ಗ​ಳನ್ನು ಪೊಲೀ​ಸ​ರಿಗೆ ಸಲ್ಲಿ​ಸಿ​ದ್ದಾರೆ ಎಂದು ತಿಳಿ​ದು​ಬಂದಿದೆ.

ನಾಳೆ ಚಾರ್ಜ್‌ಶೀಟ್‌?

ಬ್ರಿಜ್‌ ವಿರು​ದ್ಧದ ತನಿ​ಖೆ​ಯನ್ನು ಪೊಲೀ​ಸರು ಬಹು​ತೇಕ ಮುಕ್ತಾ​ಯ​ಗೊ​ಳಿ​ಸಿ​ದ್ದಾರೆ ಎನ್ನ​ಲಾ​ಗಿದ್ದು, ಗುರು​ವಾರ ನ್ಯಾಯಾ​ಲ​ಯಕ್ಕೆ ಚಾಜ್‌ರ್‍​ಶೀಟ್‌ ಸಲ್ಲಿ​ಕೆ​ಯಾ​ಗುವ ಸಾಧ್ಯತೆಯಿದೆ. ಈಗಾ​ಗಲೇ ಕಳೆದ ವಾರ ಈ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಕ್ರೀಡಾ ಸಚಿವ ಅನು​ರಾಗ್‌ ಠಾಕೂರ್‌, ಜೂ.15ರೊಳಗೆ ಜಾಜ್‌ರ್‍​ಶೀಟ್‌ ಸಲ್ಲಿ​ಸು​ವು​ದಾಗಿ ತಮ್ಮನ್ನು ಭೇಟಿ​ಯಾ​ಗಿದ್ದ ಕುಸ್ತಿ​ಪ​ಟು​ಗ​ಳಿಗೆ ಭರ​ವಸೆ ನೀಡಿ​ದ್ದ​ರು.

ಮೋದಿ ಮೌನ​ದಿಂದ ಬೇಸ​ರ: ಸಾಕ್ಷಿ ಮಲಿ​ಕ್‌

ಹಲವು ತಿಂಗ​ಳು​ಗ​ಳಿಂದ ಹೋರಾಟ ನಿರ​ತ​ರಾ​ಗಿ​ದ್ದರೂ ಪ್ರಧಾನಿ ನರೇಂದ್ರ ಮೋದಿ ಇನ್ನೂ ಮೌನ​ವಾ​ಗಿ​ರು​ವು​ದಕ್ಕೆ ಕುಸ್ತಿ​ಪಟು ಸಾಕ್ಷಿ ಮಲಿಕ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ. ಈ ಬಗ್ಗೆ ಮಾಧ್ಯ​ಮ​ವೊಂದಕ್ಕೆ ಪ್ರತಿ​ಕ್ರಿಯೆ ನೀಡಿ​ರುವ ಅವರು, ನಾವು ಪದಕ ಗೆದ್ದಾಗ ಅವರು ತಮ್ಮ ಮನೆಗೆ ಕರೆದು ಭೋಜ​ನ​ಕೂಟ ಏರ್ಪ​ಡಿ​ಸು​ತ್ತಾರೆ. ತುಂಬಾ ಪ್ರೀತಿ, ಗೌರ​ವ​ದಿಂದ ನಡೆ​ಸಿ​ಕೊ​ಳ್ಳು​ತ್ತಾರೆ. ಆದರೆ ನಮ್ಮ ಹೋರಾ​ಟದ ಬಗ್ಗೆ ಈಗಲೂ ಮೌನ​ವಾ​ಗಿ​ರು​ವುದು ನೋಡಿ ನೋವಾ​ಗಿ​ದೆ’ ಎಂದಿ​ದ್ದಾ​ರೆ.

Latest Videos
Follow Us:
Download App:
  • android
  • ios