ಅಧ್ಯಕ್ಷ ಸ್ಥಾನದ ಜೊತೆಗೆ 1 ಹಿರಿಯ ಉಪಾಧ್ಯಕ್ಷ, 4 ಉಪಾಧ್ಯಕ್ಷ, 1 ಕಾರ್ಯದರ್ಶಿ, 1 ಖಜಾಂಚಿ, 2 ಜೊತೆ ಕಾರ್ಯದರ್ಶಿ ಹಾಗೂ 5 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಸಮಿತಿಗಳಿಂದ ತಲಾ ಇಬ್ಬರು ಮತ ಚಲಾಯಿಸಲಿದ್ದಾರೆ. ಒಲಿಂಪಿಕ್ಸ್ ಭವನದಲ್ಲಿ ಚುನಾವಣೆ ನಿಗದಿಯಾಗಿದ್ದು, ಸಂಜೆ ವೇಳೆ ಫಲಿತಾಂಶ ಪ್ರಕಟವಾಗಲಿದೆ.

ನವದೆಹಲಿ(ಡಿ.21): ಹಲವು ಬಾರಿ ಮುಂದೂಡಿಕೆಯಾಗಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ)ನ ಬಹುನಿರೀಕ್ಷಿತ ಚುನಾವಣೆ ಗುರುವಾರ ನಡೆಯಲಿದೆ. ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಆಪ್ತರು ಕಣದಲ್ಲಿದ್ದು, ಎಲ್ಲಾ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಆಪ್ತ, ಉತ್ತರ ಪ್ರದೇಶ ಕುಸ್ತಿ ಸಂಸ್ಥೆ ಅಧ್ಯಕ್ಷ ಸಂಜಯ್ ಸಿಂಗ್ ಹಾಗೂ ಕುಸ್ತಿಪಟುಗಳ ಬೆಂಬಲಿತ, 2010ರ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಅನಿತಾ ಶೊರೇನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. 

ಅಧ್ಯಕ್ಷ ಸ್ಥಾನದ ಜೊತೆಗೆ 1 ಹಿರಿಯ ಉಪಾಧ್ಯಕ್ಷ, 4 ಉಪಾಧ್ಯಕ್ಷ, 1 ಕಾರ್ಯದರ್ಶಿ, 1 ಖಜಾಂಚಿ, 2 ಜೊತೆ ಕಾರ್ಯದರ್ಶಿ ಹಾಗೂ 5 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಸಮಿತಿಗಳಿಂದ ತಲಾ ಇಬ್ಬರು ಮತ ಚಲಾಯಿಸಲಿದ್ದಾರೆ. ಒಲಿಂಪಿಕ್ಸ್ ಭವನದಲ್ಲಿ ಚುನಾವಣೆ ನಿಗದಿಯಾಗಿದ್ದು, ಸಂಜೆ ವೇಳೆ ಫಲಿತಾಂಶ ಪ್ರಕಟವಾಗಲಿದೆ.

ಇಂದು ಭಾರತ-ಆಸೀಸ್‌ ಮಹಿಳೆಯರ ಟೆಸ್ಟ್‌ ಶುರು; ಟಾಸ್ ಗೆದ್ದ ಆಸೀಸ್ ಬ್ಯಾಟಿಂಗ್ ಆಯ್ಕೆ

ಈ ಮೊದಲು ಜುಲೈನಲ್ಲಿ ಡಬ್ಲ್ಯುಎಫ್‌ಐಗೆ ಮೊದಲ ಬಾರಿ ಚುನಾವಣೆ ನಿಗದಿಯಾಗಿತ್ತು. ಆ ಬಳಿಕ ಮತ್ತೆರಡು ಬಾರಿ ಚುನಾವಣೆ ಮುಂದೂಡಿಕೆಯಾಗಿದ್ದು, ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಚುನಾವಣೆ ನಡೆಸಲು ಸೂಚಿಸಿತ್ತು.

ಹಾಕಿ: ಭಾರತ ಪುರುಷರ ತಂಡಕ್ಕೆ ಮೊದಲ ಗೆಲುವು

ವೆಲೆನ್ಸಿಯಾ(ಸ್ಪೇನ್): 5 ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಬುಧವಾರ ಭಾರತ ತಂಡಕ್ಕೆ ಫ್ರಾನ್ಸ್ ವಿರುದ್ಧ 5-4 ಗೋಲುಗಳ ಗೆಲುವು ಲಭಿಸಿತು. ಇದು ಭಾರತಕ್ಕೆ ಟೂರ್ನಿಯಲ್ಲಿ ಲಭಿಸಿದ ಮೊದಲ ಜಯ. 

IPL Auction ತಪ್ಪಾಗಿ ಈ ಆಟಗಾರನಿಗೆ ಬಿಡ್‌ ಮಾಡಿದ ಪ್ರೀತಿ ಝಿಂಟಾ..! ಆಮೇಲೇನಾಯ್ತು ನೀವೇ ನೋಡಿ, ವಿಡಿಯೋ ವೈರಲ್

ಆರಂಭಿಕ 3 ಪಂದ್ಯಗಳಲ್ಲಿ ಭಾರತ ಸೋಲನುಭವಿಸಿತ್ತು. ಭಾರತದ ಪರ ಜುಗ್ರಾಜ್ ಹಾಗೂ ನಾಯಕ ಹರ್ಮನ್‌ಪ್ರೀತ್ ಸಿಂಗ್‌ತಲಾ2, ವಿವೇಕ್ ಸಾಗರ್ ಒಂದು ಗೋಲು ಹೊಡೆದರು.

ಕ್ರಿಕೆಟಿಗ ಶಮಿ ಸೇರಿ 26 ಮಂದಿಗೆ ಅರ್ಜುನ ಪ್ರಶಸ್ತಿ

ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ಮೊಹಮದ್‌ ಶಮಿ ಸೇರಿದಂತೆ 26 ಸಾಧಕರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತಾರಾ ಬ್ಯಾಡ್ಮಿಂಟನ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬುಧವಾರ ಕೇಂದ್ರ ಕ್ರೀಡಾ ಸಚಿವಾಲಯ ಕ್ರೀಡಾ ಸಾಧಕರ ಹೆಸರನ್ನು ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿತು. ಅಜಯ್‌ ರೆಡ್ಡಿ(ಅಂಧರ ಕ್ರಿಕೆಟ್‌), ಓಜಸ್‌, ಅದಿತಿ ಸ್ವಾಮಿ (ಆರ್ಚರಿ), ಶೀತಲ್‌ ದೇವಿ(ಪ್ಯಾರಾ ಆರ್ಚರಿ), ಪಾರುಲ್‌ ಚೌಧರಿ, ಶ್ರೀಶಂಕರ್‌ ಮುರಳಿ (ಅಥ್ಲೆಟಿಕ್ಸ್‌), ಮೊಹಮದ್‌ ಹುಸ್ಮುದ್ದಿನ್‌ (ಬಾಕ್ಸಿಂಗ್‌), ಆರ್‌.ವೈಶಾಲಿ (ಚೆಸ್‌), ಅಂತಿಮ್‌ ಪಂಘಲ್‌ (ಕುಸ್ತಿ) ಕೂಡಾ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇನ್ನು, ಶ್ರೇಷ್ಠ ಕೋಚ್‌ಗಳಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಗೆ ಕಬಡ್ಡಿ ಕೋಚ್‌ ಬಾಸ್ಕರನ್‌ ಸೇರಿದಂತೆ ಮೂವರು ಭಾಜನರಾಗಿದ್ದಾರೆ. ಜ.9ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.