ವಿಶ್ವಕಪ್‌'ನಲ್ಲಿ ಸ್ಪರ್ಧಿಸಲು 10 ತಂಡಗಳಿಗೆ ಅವಕಾಶವಿದೆ. 2017ರ ಸೆಪ್ಟೆಂಬರ್ 30ಕ್ಕೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 8 ಸ್ಥಾನ ಗಳಿಸಿರುವ ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿವೆ.

ದುಬೈ(ಜ.16): ಮುಂದಿನ 2019ರಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌'ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ವೆಸ್ಟ್‌'ಇಂಡೀಸ್ ಸೆಣಸಾಟ ನಡೆಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವಕಪ್‌'ನಲ್ಲಿ ಸ್ಪರ್ಧಿಸಲು 10 ತಂಡಗಳಿಗೆ ಅವಕಾಶವಿದೆ. 2017ರ ಸೆಪ್ಟೆಂಬರ್ 30ಕ್ಕೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 8 ಸ್ಥಾನ ಗಳಿಸಿರುವ ತಂಡಗಳು ಈಗಾಗಲೇ ಅರ್ಹತೆ ಗಿಟ್ಟಿಸಿವೆ. ಇನ್ನುಳಿದ 2 ಸ್ಥಾನಕ್ಕೆ ಅರ್ಹತೆ ಪಡೆಯಲು ಮಾ.4ರಿಂದ 25ರವರೆಗೆ ಜಿಂಬಾಬ್ವೆಯಲ್ಲಿ ಅರ್ಹತಾ ಪಂದ್ಯಾವಳಿ ನಡೆಯಲಿದೆ.

'ಎ' ಗುಂಪಿನಲ್ಲಿ ವಿಂಡೀಸ್ ಜತೆಗೆ ಆಫ್ಘಾನಿಸ್ತಾನ, ಐರ್ಲೆಂಡ್, ಜಿಂಬಾಬ್ವೆ, ಹಾಂಕಾಂಗ್, ನೆದರ್‌'ಲೆಂಡ್, ಸ್ಕಾಟ್ಲೆಂಡ್, ನ್ಯೂ ಗಿನಿಯಾ ಈ ತಂಡಗಳು ಹೋರಾಟ ನಡೆಸಲಿವೆ. ಇನ್ನು 'ಬಿ' ಗುಂಪಿನಲ್ಲಿ ಸ್ಥಾನಕ್ಕೆ ಕೆನಡಾ, ಕೀನ್ಯಾ ಸೇರಿದಂತೆ 6 ತಂಡಗಳು ನಮೀಬಿಯಾದಲ್ಲಿ ಹೋರಾಟ ನಡೆಸಲಿವೆ.