ವಿಂಡೀಸ್ ಮಂಡಳಿ ಅಧ್ಯಕ್ಷ ಡೇವ್ ಕ್ಯಾಮರೋನ್'ರನ್ನು 'ಬಿಗ್ ಈಡಿಯೆಟ್' ಎಂದು ಟೀಕಿಸಿದ್ದ ಡರೆನ್ ಬ್ರಾವೋ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಕಿಂಗ್ಸ್'ಟನ್(ಜು.16): ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರನ್ನೊಳಗೊಂಡ ವೆಸ್ಟ್‌ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ.
80ರ ದಶಕದಲ್ಲಿ ಬಲಿಷ್ಟ ಟೆಸ್ಟ್ ತಂಡವಾಗಿ ಗುರುತಿಸಿಕೊಂಡಿದ್ದ ವೆಸ್ಟ್ ಇಂಡಿಸ್ ಇದೀಗ ಕಳೆದ ಆರು ಟೆಸ್ಟ್ ಸರಣಿಯಲ್ಲಿ ಸೋತು ಸುಣ್ಣವಾಗಿದೆ.
ಮೊದಲ ಟೆಸ್ಟ್ ಆಗಸ್ಟ್ 17ರಿಂದ ಆರಂಭಗೊಳ್ಳಲಿದ್ದು, ಜೇಸನ್ ಹೋಲ್ಡರ್ ವೆಸ್ಟ್ ಇಂಡಿಸ್ ತಂಡವನ್ನು ಮುನ್ನಡೆಸಲಿದ್ದಾರೆ.
18 ತಿಂಗಳ ಬಳಿಕ ವೇಗಿ ಕೀಮಾರ್ ರೋಚ್ ತಂಡಕ್ಕೆ ವಾಪಸ್ಸಾಗಿದ್ದಾರೆ. ರೋಚ್ 37 ಟೆಸ್ಟ್ ಪಂದ್ಯಗಳನ್ನಾಡಿದ್ದು, 122 ವಿಕೆಟ್ ಕಿತ್ತಿದ್ದಾರೆ.
ವಿಂಡೀಸ್ ಮಂಡಳಿ ಅಧ್ಯಕ್ಷ ಡೇವ್ ಕ್ಯಾಮರೋನ್'ರನ್ನು 'ಬಿಗ್ ಈಡಿಯೆಟ್' ಎಂದು ಟೀಕಿಸಿದ್ದ ಡರೆನ್ ಬ್ರಾವೋ ಅವರನ್ನು ತಂಡದಿಂದ ಕೈಬಿಡಲಾಗಿದೆ.
ತಂಡದ ವಿವರ:
ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್'ವೇಟ್, ದೇವೇಂದ್ರ ಬಿಶೂ, ಜರ್ಮೈನ್ ಬ್ಲಾಕ್'ವುಡ್, ರೋಸ್ಟನ್ ಚೇಸ್, ಮಿಗಲ್ ಕಮ್ಮಿನ್ಸ್, ಶೇನ್ ಡೌರಿಚ್, ಶಾನೋನ್ ಗೇಬ್ರಿಯಲ್, ಸಿಮ್ರಾನ್ ಹೇಟ್ಮೆಯರ್, ಕೈಲ್ ಹೋಪ್, ಶಾಯ್ ಹೋಪ್, ಅಲ್ಜರಿ ಜೋಸೆಫ್, ಕೀರನ್ ಪೊವೆಲ್, ರೇಯ್ಮನ್ ರೈಫರ್, ಕೀಮಾರ್ ರೋಚ್.
