ದೈತ್ಯ ಕ್ರಿಕೆಟಿಗ ಕಾರ್ನ್‌ವೆಲ್ ಟೆಸ್ಟ್‌ಗೆ ಪದಾರ್ಪಣೆ

ವೆಸ್ಟ್ ಇಂಡೀಸ್ ತಂಡದ ದೈತ್ಯ ಕ್ರಿಕೆಟಿಗ ರಾಕೀಂ ಕಾರ್ನೆವೆಲ್‌ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಮೊದಲ ಪಂದ್ಯದಲ್ಲೇ ಚೇತೇಶ್ವರ್ ಪೂಜಾರ ವಿಕೆಟ್ ಪಡೆಯುವಲ್ಲೂ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

West Indies heaviest Cricketer Rahkeem Cornwall makes debut against India

ಕಿಂಗ್ಸ್‌ಟನ್[ಆ.31] ಶುಕ್ರವಾರ ಆರಂಭವಾದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ 2ನೇ ಟೆಸ್ಟ್ ಪಂದ್ಯ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. 

ಮಯಾಂಕ್ -ಕೊಹ್ಲಿ ಫಿಫ್ಟಿ: ಬೃಹತ್ ಮೊತ್ತದತ್ತ ಭಾರತ

ವಿಶ್ವ ಕ್ರಿಕೆಟ್‌ನ ಅಜಾನುಬಾಹು ರಾಕೀಂ ಕಾರ್ನ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 26 ವರ್ಷದ ಕಾರ್ನ್‌ವೆಲ್ 6 ಅಡಿ 5 ಇಂಚು ಎತ್ತರ, 140 ಕೆ.ಜಿ. ತೂಕ ಹೊಂದಿದ್ದಾರೆ. ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಹಾಗೂ ಆಫ್ ಬ್ರೇಕ್ ಬೌಲರ್ ಆಗಿರುವ ಕಾರ್ನ್ ವೆಲ್ ವಿಂಡೀಸ್‌ಗೆ ಹೆಚ್ಚಿನ ಬಲ ತುಂಬಲಿದ್ದಾರೆ. ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. 

KPL 2019: ಬೆಳಗಾವಿಗೆ ಶಾಕ್; ಫೈನಲ್‌‌ ಪ್ರವೇಶಿಸಿದ ಹುಬ್ಳಿ ಟೈಗರ್ಸ್!

ಕಳೆದ ತಿಂಗಳು ನಡೆದ ಭಾರತ ’ಎ’ ವಿರುದ್ಧದ ವೆಸ್ಟ್ ಇಂಡೀಸ್ ’ಎ’ ತಂಡವನ್ನ ಪ್ರತಿನಿಧಿಸಿದ್ದ ರಾಕೀಂ ಕಾರ್ನ್'ವೆಲ್ ಆಡಿದ 2 ಪಂದ್ಯಗಳಲ್ಲಿ 2 ಅರ್ಧಶತಕ ಹಾಗೂ 4 ವಿಕೆಟ್ ಪಡೆದು ಮಿಂಚಿದ್ದರು.

ರಿಚರ್ಡ್’ಸನ್ ಅಸ್ವಸ್ಥ! :

ಬ್ಯಾಟಿಂಗ್ ದಂತಕತೆ ಸರ್ ವಿವಿಯನ್ ರಿಚರ್ಡ್ಸ್ ಟೀವಿ ನೇರಪ್ರಸಾರದ ವೇಳೆ ಏಕಾಏಕಿ ಅಸ್ವಸ್ಥರಾಗಿದ್ದಾರೆ. ಸರ್ ರಿಚರ್ಡ್ಸ್‌ರನ್ನು ಕರೆದೊಯ್ಯಲು ಸ್ಟ್ರೆಚರ್ ತರಿಸಲಾಯಿತು. ಆದರೆ ಸಿಬ್ಬಂದಿಗಳ ಸಹಾಯದಿಂದ ಸರ್ ರಿಚರ್ಡ್ಸ್ ನಡೆದುಕೊಂಡೇ ಮೈದಾನದಿಂದ ಹೊರನಡೆದರು.

2ನೇ ಪಂದ್ಯ ಆರಂಭಕ್ಕೂ ಮುನ್ನ ರಿಚರ್ಡ್ಸ್, ಸೋನಿ ಕಾರ್ಯಕ್ರಮದಲ್ಲಿ ವಿಶ್ಲೇಷಣೆ ನೀಡುತ್ತಿದ್ದರು. ಕೆಲ ಸಮಯದ ಬಳಿಕ ಚೇತರಿಸಿ ಕೊಂಡ ರಿಚರ್ಡ್ಸ್ ಮತ್ತೆ ವಿಶ್ಲೇಷಣೆಗೆ ಹಾಜರಾದರು.
 

Latest Videos
Follow Us:
Download App:
  • android
  • ios