ರಾತ್ರಿ ವೇಳೆ ಮಹಿಳಾ ಹಾಸ್ಟೆಲ್‌ಗೆ ಹೋದ ವೇಟ್‌ಲಿಫ್ಟರ್ ಶೆಹುಲಿ ಒಲಿಂಪಿಕ್ ಶಿಬಿರದಿಂದ ಔಟ್
ಗುರುವಾರ ರಾತ್ರಿ ಇಲ್ಲಿನ ಎನ್‌ಐಎಸ್ ತರಬೇತಿ ಕೇಂದ್ರದಲ್ಲಿ 22ರ ಅಚಿಂತಾ ಮಹಿಳಾ ಹಾಸ್ಟೆಲ್‌ಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಚಿಂತಾರನ್ನು ಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶಿಬಿರದಿಂದ ಹೊರಬಿದ್ದಿದ್ದರಿಂದ ಅಚಿಂತಾರ ಒಲಿಂಪಿಕ್ಸ್ ಕನಸು ಕೂಡಾ ಬಹುತೇಕ ಭಗ್ನಗೊಂಡಿದೆ.
ಪಟಿಯಾಲಾ(ಮಾ.17): ಪ್ಯಾರಿಸ್ ಒಲಿಂಪಿಕ್ಸ್ ಪೂರ್ವಸಿದ್ಧತಾ ಶಿಬಿರದಲ್ಲಿ ರಾತ್ರಿ ವೇಳೆ ಮಹಿಳಾ ಹಾಸ್ಟೆಲ್ ಗೆ ತೆರಳುತ್ತಿದ್ದಾಗ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ವೇಟ್‌ಲಿಫರ್ ಅಚಿಂತಾ ಶೆಹುಲಿ ಸಿಕ್ಕಿಬಿದ್ದಿದ್ದು, ಅವರನ್ನು ಶಿಬಿರದಿಂದ ಹೊರ ಹಾಕಲಾಗಿದೆ.
ಗುರುವಾರ ರಾತ್ರಿ ಇಲ್ಲಿನ ಎನ್‌ಐಎಸ್ ತರಬೇತಿ ಕೇಂದ್ರದಲ್ಲಿ 22ರ ಅಚಿಂತಾ ಮಹಿಳಾ ಹಾಸ್ಟೆಲ್‌ಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಚಿಂತಾರನ್ನು ಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶಿಬಿರದಿಂದ ಹೊರಬಿದ್ದಿದ್ದರಿಂದ ಅಚಿಂತಾರ ಒಲಿಂಪಿಕ್ಸ್ ಕನಸು ಕೂಡಾ ಬಹುತೇಕ ಭಗ್ನಗೊಂಡಿದೆ.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಸೆಮಿಫೈನಲ್‌ನಲ್ಲಿ ಭಾರತದ ಸೇನ್‌ಗೆ ಸೋಲಿನ ಆಘಾತ!
ಬರ್ಮಿಂಗ್‌ಹ್ಯಾಮ್: ಭಾರತದ ತಾರಾ ಶಟ್ಲರ್ ಲಕ್ವ ಸೇನ್ ಅವರ ಚೊಚ್ಚಲ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆಲ್ಲುವ ಕನಸು ಭಗ್ನಗೊಂಡಿದೆ. 22ರ ಸೇನ್ ಶನಿವಾರ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
WPL 2024 Final ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್: ಈ ಸಲ ಕಪ್ ಯಾರಿಗೆ?
2022ರಲ್ಲಿ ರನ್ನರ್-ಅಪ್ ಆಗಿದ್ದ ಸೇನ್ ಪುರುಷರ ಸಿಂಗಲ್ಸ್ ಅಂತಿಮ 4ರ ಘಟ್ಟದ ಪಂದ್ಯದಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟೀ ವಿರುದ್ಧ 12-21, 21-10, 15-21 ಗೇಮ್‌ಗಳಲ್ಲಿ ಪರಾಭವಗೊಂಡರು. ಇದು ಕ್ರಿಸ್ಟೀ ವಿರುದ್ಧ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್, ವಿಶ್ವ ನಂ.18 ಸೇನ್‌ಗೆ 4 ಪಂದ್ಯಗಳಲ್ಲಿ ಎದುರಾದ 3ನೇ ಸೋಲು. ಇದಕ್ಕೂ ಮುನ್ನ ಸೇನ್ ಶುಕ್ರವಾರ ರಾತ್ರಿ ಮಲೇಷ್ಯಾದ ಲೀ ಝಿ ಜಿಯಾ ವಿರುದ್ದ ಕ್ವಾರ್ಟರ್ ಫೈನಲ್‌ನಲ್ಲಿ 20-22, 21-16, 21-19ರಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದರು.
ಆರ್ಲಿಯನ್ಸ್ ಬ್ಯಾಡ್ಮಿಂಟನ್: ಪ್ರತೀಕ್-ಕೃಷ್ಣಗೆ ಸೋಲು
ಆರ್ಲಿಯನ್ಸ್ (ಫ್ರಾನ್ಸ್): ಭಾರತದ ತಾರಾ ಜೋಡಿ ಸಾಯಿ ಪ್ರತೀಕ್ -ಕೃಷ್ಣ ಪ್ರಸಾದ್ ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ಭಾರತದ ಅಭಿಯಾನ ಕೊನೆಗೊಂಡಿದೆ. ಶುಕ್ರವಾರ ರಾತ್ರಿ ನಡೆದ ಪುರುಷರ ಡಬಲ್ಸ್ ಅಂತಿಮ 8ರ ಸುತ್ತಿನಲ್ಲಿ ವಿಶ್ವನಂ.70 ಪ್ರತೀಕ್ -ಕೃಷ್ಣ ಜೋಡಿ ಡೆನ್ಮಾರ್ಕ್‌ನ ಆ್ಯಂಡ್ರಿಸ್ ಸೊಂಡೆರ್‌ಗಾರ್ಡ್-ಜೆಸ್ಟೆಟೊಫ್ಟ್ ವಿರುದ್ಧ 17-21, 16-21ರಲ್ಲಿ ಸೋಲನುಭವಿಸಿತು.
ಅಭಿಮಾನಿಗಳಿಗೆ ಗುಡ್ ನ್ಯೂಸ್, ಐಪಿಎಲ್ 2024 ಸ್ಥಳಾಂತರ ಕುರಿತು ಬಿಸಿಸಿಐ ಸ್ಪಷ್ಟನೆ!
ಭಾರತದ ರಾಮ್ ಬಾಬು ಒಲಿಂಪಿಕ್ಸ್‌ಗೆ ಅರ್ಹತೆ
ನವದೆಹಲಿ: 20 ಕಿ.ಮೀ. ರೇಸ್‌ವಾಕ್‌ನಲ್ಲಿ ಭಾರತದ ರಾಮ್ ಬಾಬು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ ಕೊಂಡಿದ್ದಾರೆ. ಏಷ್ಯನ್ ಗೇಮ್ಸ್‌ನ 35 ಕಿ.ಮೀ. ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ರಾಮ್, ಸೊವೇಕಿ ಯಾದಲ್ಲಿ ನಡೆದ ಅರ್ಹತಾ ಕೂಟದಲ್ಲಿ 20 ಕಿ.ಮೀ. ದೂರವನ್ನು 1 ಗಂಟೆ 20.00 ನಿಮಿಷಗಳಲ್ಲಿ ಕ್ರಮಿಸಿ ಒಲಿಂಪಿಕ್ ಟಿಕೆಟ್ ಪಡೆದುಕೊಂಡರು. ರಾಮ್ ರೇಸ್ ವಾಕ್‌ನಲ್ಲಿ ಒಲಿಂಪಿಕ್ಸ್ ಪ್ರವೇಶಿಸಿದ 7ನೇ ಭಾರತೀಯ.