ಸುಮಾರು ಒಂದು ದಶಕದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನವದೆಹಲಿ(ಅ.24): ನಮ್ಮ ಹಾಕಿ ತಂಡದಲ್ಲಿ ಇನ್ನೂ ಸ್ಥಿರತೆಯ ಕೊರತೆ ಕಾಡುತ್ತಿದೆ ಎಂದು ಭಾರತ ಹಾಕಿ ತಂಡ ಏಷ್ಯಾಕಪ್ ಜಯಿಸಿದ ಬೆನ್ನಲ್ಲೇ ತಂಡದ ಕೋಚ್ ಸೋರ್ಡ್ ಮರಿನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕೋಚ್ ಆದ ಮೊದಲ ಪಂದ್ಯಾವಳಿಯಲ್ಲೇ ಪ್ರಶಸ್ತಿ ಜಯಿಸಿದ್ದು ಖುಷಿಯನ್ನುಂಟು ಮಾಡಿದೆ. ನಿಜವಾಗಿಯೂ ನಾವು ಉತ್ತಮ ಆಟ ಆಡಿದೆವು. ಆಟಗಾರರ ಪ್ರದರ್ಶನ ಸಂತಸ ತಂದಿದೆ. ಆದರೆ, ಮಲೇಷ್ಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ

ಸ್ಥಿರತೆಯ ಕೊರತೆ ನಮ್ಮನ್ನು ಕಾಡಿತು. ಇದೇ ಕಾರಣದಿಂದಲೇ ಮತ್ತಷ್ಟು ಗೋಲು ಗಳಿಸುವ ಅವಕಾಶ ಕೈತಪ್ಪಿತು’ ಎಂದು ಮರಿನೆ ಹೇಳಿದ್ದಾರೆ.

ರೋಲೆಂಟ್ಸ್ ಓಲ್ಟ್ಸ್'ಮನ್ ಭಾರತ ಹಾಕಿ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ, ಮಹಿಳಾ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸೋರ್ಡ್ ಮರಿನೆ ಪುರುಷರ ತಂಡದ ಕೋಚ್ ಆಗಿ ನೇಮಕವಾಗಿದ್ದರು.

ಸುಮಾರು ಒಂದು ದಶಕದ ಬಳಿಕ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ.