ಮೊದಲ ಟಿ20 ಸೋಲಿನ ಬಗ್ಗೆ ನಾವು ಅಷ್ಟೇನು ತಲೆ ಕೆಡಿಸಿಕೊಂಡಿಲ್ಲ. ನಾವೆಲ್ಲ 100 ಪ್ರತಿಶತ ಆಟವಾಡಲು ಪ್ರಯತ್ನಿಸುತ್ತೇವೆ.
ಗುವಾಹಟಿ(ಅ.10): ಏಕದಿನ ಸರಣಿ ಸೋಲಿನಿಂದ ನಾವು ಕಳೆಗುಂದಿಲ್ಲ, ಎರಡನೇ ಪಂದ್ಯದಲ್ಲಿ ಬಲಿಷ್ಟ ಹೋರಾಟ ಮಾಡುವ ಮೂಲಕ ಟೀಂ ಇಂಡಿಯಾಗೆ ತಕ್ಕ ತಿರುಗೇಟು ನೀಡಲಿದ್ದೇವೆ ಎಂದು ಆಸ್ಟ್ರೇಲಿಯಾ ತಂಡದ ಹಂಗಾಮಿ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.
ಈಗಾಗಲೇ ಏಕದಿನ ಸರಣಿಯಲ್ಲಿ 1-4 ಅಂತರದಲ್ಲಿ ಸರಣಿ ಕೈಚೆಲ್ಲಿ, ಟಿ20 ಸರಣಿಯಲ್ಲೂ 0-1 ಅಂತರದ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ ತಂಡದ ನಿರಾಶದಾಯಕ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ವಾರ್ನರ್, ಆಸ್ಟ್ರೇಲಿಯಾ ತಂಡಕ್ಕೆ ತನ್ನದೇ ಆದ ಛಾಪು ಇದೆ. ಹಾಗಾಗಿ ಎರಡನೇ ಪಂದ್ಯದಲ್ಲಿ ಕಮ್'ಬ್ಯಾಕ್ ಮಾಡಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮೊದಲ ಟಿ20 ಸೋಲಿನ ಬಗ್ಗೆ ನಾವು ಅಷ್ಟೇನು ತಲೆ ಕೆಡಿಸಿಕೊಂಡಿಲ್ಲ. ನಾವೆಲ್ಲ 100 ಪ್ರತಿಶತ ಆಟವಾಡಲು ಪ್ರಯತ್ನಿಸುತ್ತೇವೆ. ನಾವು ಆ್ಯಷಸ್ ಸರಣಿಯ ಬಗ್ಗೆ ಯೋಚಿಸಿಲ್ಲ, ನಮ್ಮ ಗುರಿಯೇನಿದ್ದರೂ ಎರಡನೇ ಟಿ20 ಪಂದ್ಯವನ್ನು ಗೆಲ್ಲುವುದಾಗಿದೆ ಎಂದು ವಾರ್ನರ್ ಹೇಳಿದ್ದಾರೆ.
