ಮೂರು ಪಂದ್ಯಗಳ ಟೆಸ್ಟ್ ಸರಣಿ ಗುರುವಾರ(ಜ.04)ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಕೇಪ್'ಟೌನ್'ನಲ್ಲಿ ನಡೆಯಲಿದೆ. ಇದುವರೆಗೂ ಒಮ್ಮೆಯೂ ಟೆಸ್ಟ್ ಸರಣಿ ಜಯಿಸಿಲ್ಲ. ಈಗಾಗಲೇ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೊಸ ಇತಿಹಾಸ ನಿರ್ಮಿಸುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್'ಮನ್ ಶಿಖರ್ ಧವನ್ ಕೂಡಾ ಫಿಟ್ ಆಗಿದ್ದು ತಂಡಕ್ಕೆ ಇನ್ನಷ್ಟು ಬಲ ಬಂದಂತಾಗಿದೆ.
ಕೇಪ್'ಟೌನ್(ಜ.04): ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ, ವಿರಾಟ್ ಕೊಹ್ಲಿ ವರ್ಸಸ್ ಆಫ್ರಿಕಾದ ವೇಗಿಗಳು ಎಂದೇ ಬಿಂಬಿತವಾಗಿದ್ದರೂ, ಇದನ್ನು ಒಪ್ಪಲು ತಾವು ಸಿದ್ಧರಿಲ್ಲ ಎಂದು ಹರಿಣ ಪಡೆಯ ವೇಗಿ ವರ್ನೊನ್ ಫಿಲಾಂಡರ್ ಹೇಳಿದ್ದಾರೆ.
‘ಎಲ್ಲಾ 11 ಆಟಗಾರರೂ ನಮ್ಮ ಎದುರಾಳಿಗಳೇ. ಕೊಹ್ಲಿ ಒಬ್ಬರೇ ಅಲ್ಲ. ಭಾರತವನ್ನು ಪಂದ್ಯದಲ್ಲಿ 2 ಬಾರಿ ಆಲೌಟ್ ಮಾಡಿ ಗೆಲ್ಲುವುದೊಂದೇ ನಮ್ಮ ಗುರಿ. ಯಾವುದೇ ಒಬ್ಬ ಆಟಗಾರನನ್ನು ಗುರಿಯಾಗಿಸಿಕೊಂಡು ತಂತ್ರ ರೂಪಿಸುವುದು ನಮ್ಮ ಯೋಜನೆಯಲ್ಲ’ ಎಂದು ಫಿಲಾಂಡರ್ ಹೇಳಿದ್ದಾರೆ.