ಐಪಿಎಲ್ : ಪುಣೆಯಲ್ಲಿ ರನ್ ಮಳೆ ಹರಿಸಿದ ಸಿಎಸ್’ಕೆ

Watson, Dhoni power Chennai Super Kings to 211 for 4
Highlights

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್’ಕೆ ಭರ್ಜರಿ ಆರಂಭವನ್ನೇ ಪಡೆಯಿತು. ಶೇನ್ ವಾಟ್ಸನ್ ಹಾಗೂ ಫಾಪ್ ಡು ಪ್ಲೆಸಿಸ್ ಮೊದಲ ವಿಕೆಟ್’ಗೆ 102 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.

ಪುಣೆ[ಏ.30]: ಶೇನ್ ವಾಟ್ಸನ್, ಎಂ.ಎಸ್. ಧೋನಿ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಡೇರ್’ಡೆವಿಲ್ಸ್ ವಿರುದ್ಧ ಚೆನ್ನೈ ಸೂಪರ್’ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 211 ರನ್’ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್’ಕೆ ಭರ್ಜರಿ ಆರಂಭವನ್ನೇ ಪಡೆಯಿತು. ಶೇನ್ ವಾಟ್ಸನ್ ಹಾಗೂ ಫಾಪ್ ಡು ಪ್ಲೆಸಿಸ್ ಮೊದಲ ವಿಕೆಟ್’ಗೆ 102 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಡುಪ್ಲೆಸಿಸ್ 33 ರನ್ ಬಾರಿಸಿ ವಿಜಯ್ ಶಂಕರ್’ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರೈನಾ[1] ಕೂಡಾ ಮ್ಯಾಕ್ಸ್’ವೆಲ್’ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

14ನೇ ಓವರ್’ನ ಕೊನೆಯ ಎಸೆತದಲ್ಲಿ ವಾಟ್ಸನ್[78] ಕೂಡಾ ಪೆವಿಲಿಯನ್ ಸೇರಿಸಿದರು. ವಾಟ್ಸನ್ 40 ಎಸೆತಗಳಲ್ಲಿ 7 ಸಿಕ್ಸರ್ 4 ಬೌಂಡರಿಗಳ ನೆರವಿನಿಂದ ಅಮೂಲ್ಯ 78 ರನ್ ಬಾರಿಸಿದರು. ಆ ಬಳಿಕ ಅಂಬಟಿ ರಾಯುಡು ಕೂಡಿಕೊಂಡ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ಧೋನಿ ಕೇವಲ 22 ಎಸೆತಗಳಲ್ಲಿ 51 ರನ್ ಸಿಡಿಸಿದರೆ, ರಾಯುಡು 24 ಎಸೆತಗಳಲ್ಲಿ 41 ರನ್ ಬಾರಿಸಿದರು. ನಾಲ್ಕನೇ ವಿಕೆಟ್’ಗೆ ಈ ಜೋಡಿ 79 ರನ್ ಕಲೆಹಾಕಿತು. 
ಸಂಕ್ಷಿಪ್ತ ಸ್ಕೋರ್:
ಸಿಎಸ್’ಕೆ: 211/4
ವಾಟ್ಸನ್: 78
ಮ್ಯಾಕ್ಸ್’ವೆಲ್:5/1
[*ವಿವರ ಅಪೂರ್ಣ] 

loader