ಲಂಡನ್(ಜು.14): ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯತ್ತ ಚಿತ್ತ ನೆಟ್ಟಿದ್ದಾರೆ. ಫ್ರಾನ್ಸ್ ಹಾಗೂ ಕ್ರೊವೆಷಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಯಾರು ಗೆಲವು ಸಾಧಸಲಿದ್ದಾರೆ ಅನ್ನೋ ಕುತೂಹಲ ಇದೀಗ ಟೀಂ ಇಂಡಿಯಾದಲ್ಲೂ ಮನೆ ಮಾಡಿದೆ.

ಟೀಂ ಇಂಡಿಯಾ ಯುವ ಸ್ಪಿನ್ನರ್ ಕುಲದೀಪ್ ಯಾದವ್, ಫಿಫಾ ವಿಶ್ವಕಪ್ ಫೈನಲ್ ಭವಿಷ್ಯ ನುಡಿದಿದ್ದಾರೆ.  ಕುಲದೀಪ್ ಪ್ರಕಾರ ಈ ಬಾರಿ ಫ್ರಾನ್ಸ್ ವಿಶ್ವಕಪ್ ಗೆಲ್ಲಲಿದೆ ಎಂದಿದ್ದಾರೆ. ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಜೊತೆ ಬಿಸಿಸಿಐಗೆ ನೀಡಿದ ಸಂದರ್ಶನದಲ್ಲಿ ಕುಲದೀಪ್ ಯಾದವ್ ಫಿಫಾ ಫೈನಲ್ ಭವಿಷ್ಯ ಹೇಳಿದ್ದಾರೆ.

 

 

ಕುಲದೀಪ್ ಯಾದವ್ ನೆಚ್ಚಿನ ತಂಡ ಬ್ರೆಜಿಲ್. ಆದರೆ ಬ್ರೆಜಿಲ್ ತಂಡ ನಾಕೌಟ್ ಹಂತದಿಂದಲೇ ನಿರ್ಗಮಿಸಿತ್ತು. ಹೀಗಾಗಿ ಇದೀಗ ಫ್ರಾನ್ಸ್ ತಂಡಕ್ಕೆ ಬಂಬಲ ಸೂಚಿಸುವುದಾಗಿ ಕುಲದೀಪ್ ಹೇಳಿದ್ದಾರೆ.  ನಾಳೆ(ಜು.15) ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಹಾಗೂ ಕ್ರೊವೆಷಿಯಾ ಹೋರಾಟ ನಡೆಸಲಿದೆ.