ಟೀಂ ಇಂಡಿಯಾ ಕ್ರಿಕೆಟಿಗರ ಮುಂದೆ ಕ್ರುನಾಲ್-ದೀಪಕ್ ಭಾಷಣ ಹೇಗಿತ್ತು?ಇಲ್ಲಿದೆ ವೀಡಿಯೋ

First Published 5, Jul 2018, 2:14 PM IST
WATCH: Krunal Pandya, Deepak Chahar give ‘newcomer’ speech in Indian dressing room
Highlights

ಟೀಂ ಇಂಡಿಯಾ ಸೇರಿಕೊಳ್ಳೋ ನೂತನ ಕ್ರಿಕೆಟಿಗರು ಮೊದಲು ತಮ್ಮ ಪರಿಚಯ ಮಾಡಿಕೊಂಡು, ಸ್ವಾಗತ ಭಾಷಣ ಮಾಡಬೇಕು. ಇದೀಗ ತಂಡ ಸೇರಿಕೊಂಡಿರುವ ಕ್ರುನಾಲ್ ಪಾಂಡ್ಯ ಹಾಗೂ ದೀಪಕ್ ಚಹಾರ್ ಸ್ವಾಗತ ಭಾಷಣ ಹೇಗಿತ್ತು? ಇಲ್ಲಿದೆ ನೋಡಿ.

ಓಲ್ಡ್ ಟ್ರಾಫೋರ್ಡ್(ಜು.05): ಐಪಿಎಲ್ ಟೂರ್ನಿ ಹಾಗೂ ಇಂಡಿಯಾ ಎ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರುನಾಲ್ ಪಾಂಡ್ಯ ಹಾಗೂ ದೀಪಕ್ ಚಹಾರ್ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಈ ಯವ ಪ್ರತಿಭೆಗಳಿಗೆ ಅವಕಾಶ ಸಿಕ್ಕಿಲ್ಲ. ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ವಾಶಿಂಗ್ಟನ್ ಸುಂದರ್ ಇಂಜುರಿಯಿಂದ ತೆರವಾದ ಸ್ಥಾನಕ್ಕೆ ಈ ಇಬ್ಬರನ್ನೂ ಆಯ್ಕೆ ಮಾಡಲಾಗಿದೆ.

ಒಲ್ಡ್ ಟ್ರಾಫೋರ್ಡ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯಕ್ಕೂ ಮೊದಲು ಕ್ರುನಾಲ್ ಪಾಂಡ್ಯ ಹಾಗೂ ದೀಪಕ್ ಚಹಾರ್ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ತಂಡ ಸೇರಿಕೊಂಡ ಕ್ರುನಾಲ್ ಹಾಗೂ ದೀಪಕ್ ಟೀಂ ಇಂಡಿಯಾ ಕ್ರಿಕೆಟಿಗರ ಮುಂದೆ ನ್ಯೂಕಮರ್ ಸ್ವೀಚ್ ಮಾಡಿದ್ದಾರೆ.

ಮೊದಲ ದೀಪಕ್ ಚಹಾರ್ ಭಾಷಣ ಮಾಡಿದರು. ಚೇರ್ ಮೇಲೆ ನಿಂತು ತಮ್ಮ ಕ್ರಿಕೆಟ್ ಪಯಣ ಕುರಿತು ಕಿರು ಭಾಷಣ ಮಾಡಿದರು. ಕೋಚ್ ರವಿ ಶಾಸ್ತ್ರಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಇವರ ಭಾಷಣ ಆಲಿಸಿದರು.

 

 

ದೀಪಕ್ ಚಹಾರ್ ಬಳಿಕ ಕ್ರುನಾಲ್ ಪಾಂಡ್ಯ ಸರದಿ. ಬರೋಡಾದಿಂದ ಗುಜರಾತ್, ಇದೀಗ ಇಂಡಿಯಾವರೆಗೂ ನನ್ನ ಕ್ರಿಕೆಟ್ ಸಾಗಿದೆ ಅನ್ನೋದೇ ನನಗೆ ಹೆಮ್ಮೆ ಎಂದು ಕ್ರುನಾಲ್ ತಮ್ಮ ನ್ಯೂಕಮರ್ ಸ್ಪೀಚ್‌ನಲ್ಲಿ ಹೇಳಿದ್ದಾರೆ.

 

;

 

ನ್ಯೂಕಮರ್ ಸ್ವೀಚ್ ಮಾಡಿ ಗಮನಸೆಳೆದಿರುವ ಕ್ರುನಾಲ್ ಹಾಗೂ ದೀಪಕ್ ಮುಂದಿನ ಪಂದ್ಯಗಳಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಇನ್ನ 2 ಟಿ20, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯ ಆಡಲಿದೆ.
 

loader