ಸಮಯ ಸಿಕ್ಕಾಗಲೆಲ್ಲಾ ಮುದ್ದಿನ ನಾಯಿಯನ್ನು ಮುದ್ದಾಡುವ ಮಾಹಿ, ಇದೀಗ ತಮ್ಮ ನಿವಾಸದಲ್ಲಿ ಡಚ್ ಶೆಫರ್ಡ್ ನಾಯಿಗೆ ಟ್ರೈನಿಂಗ್ ಕೊಡುತ್ತಾ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ರಾಂಚಿ(ನ.15): ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಗೆಲುವಿನ ಡಡ ಸೇರಿಸದಿದ್ದಕ್ಕೆ ಹಲವು ಮಾಜಿ ಕ್ರಿಕೆಟಿಗರಿಂದ ಟೀಕೆಗೆ ಗುರಿಯಾಗಿದ್ದು ನಮಗೆಲ್ಲ ಗೊತ್ತೇ ಇದೆ. ಆದರೆ ಸದ್ಯ ಶ್ರೀಲಂಕಾ ಎದುರು ಟೆಸ್ಟ್ ಸರಣಿಯಿರುವುದರಿಂದ ಮಾಹಿಗೆ ಬಿಡುವು ಸಿಕ್ಕಿದೆ. ಈ ಬಿಡುವಿನ ಸಮಯವನ್ನು ರಾಂಚಿ ಬಾಯ್ ಧೋನಿ ಸಖತ್ತಾಗಿಯೇ ಎಂಜಾಯ್ ಮಾಡುತ್ತಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ಮುದ್ದಿನ ನಾಯಿಯನ್ನು ಮುದ್ದಾಡುವ ಮಾಹಿ, ಇದೀಗ ತಮ್ಮ ನಿವಾಸದಲ್ಲಿ ಡಚ್ ಶೆಫರ್ಡ್ ನಾಯಿಗೆ ಟ್ರೈನಿಂಗ್ ಕೊಡುತ್ತಾ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ.
ಜೋಯಾ(ಡಚ್ ಶೆಫರ್ಡ್) ಸ್ವಲ್ಪ ಟ್ರೈನಿಂಗ್ ಪಡೆಯುತ್ತಿದ್ದರೆ, ಲಿಲ್ಲಿಯು ಚಿಯರಿಂಗ್ ಮಾಡುವ ಕೆಲಸದಲ್ಲಿದೆ ಎಂದು ಧೋನಿ ತಮ್ಮ ಇನ್ಸ್'ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಧೋನಿ ಜೋಯಾಗೆ ಟ್ರೈನಿಂಗ್ ಕೊಡುತ್ತಿರುವುದನ್ನು ನೋಡಿದರೆ, ಯಾವುದೇ ನಾಯಿಯ ರೇಸ್'ಗೆ ಸಿದ್ದಂತೆ ನಡೆಸುತ್ತಿರುವಂತೆ ಕಾಣುತ್ತಿದೆ.
ZOYA(Dutch shepherd) does some training and LILY(husky) does the cheering job
A post shared by @mahi7781 on
ಟೆಸ್ಟ್ ಸರಣಿ ಮುಗಿದ ಬಳಿಕ ಡಿಸೆಂಬರ್'ನಲ್ಲಿ ಧೋನಿ ಮತ್ತೆ ಮೈದಾನಕ್ಕಿಳಿಯಲಿದ್ದು ಶ್ರೀಲಂಕಾ ಎದುರಿನ ಏಕದಿನ ಹಾಗೂ ಟಿ20 ಸರಣಿಯಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.
