ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಒಲ್ಡ್ ಟ್ರಾಫೋರ್ಡ್‌ನಲ್ಲಿ ಕಸರತ್ತು ನಡೆಸುತ್ತಿದೆ. ಅಭ್ಯಾಸ ನಡುವೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್ ಧವನ್ ಅದ್ಬುತ ಡ್ಯಾನ್ಸ್ ಮಾಡಿದ್ದಾರೆ. ಪಾಂಡ್ಯ ಹಾಗೂ ಧವನ್ ಸೂಪರ್ ಡ್ಯಾನ್ಸ್ ಇಲ್ಲಿದೆ ನೋಡಿ.

ಒಲ್ಡ್ ಟ್ರಾಫೋರ್ಡ್(ಜು.02): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಒಲ್ಡ್ ಟ್ರಾಫೋರ್ಡ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಅಭ್ಯಾಸ ಬಳಿಕ ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್ ಧವನ್ ಸೂಪರ್ ಡ್ಯಾನ್ಸ್ ಮಾಡಿ ಗಮನಸೆಳೆದಿದ್ದಾರೆ.

ಪಾಂಡ್ಯ ಹಾಗೂ ಶಿಖರ್ ಧವನ್ ಅದ್ಬುತ ಡ್ಯಾನ್ಸ್ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಹಾರ್ದಿಕ್ ಹಲವು ಸಮಾರಂಭ ಹಾಗೂ ಸ್ಟೇಜ್‌ಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ಶಿಖರ್ ಧವನ್ ಅದ್ಬುತ ಪಂಜಾಬಿ ಡ್ಯಾನ್ಸ್ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Scroll to load tweet…

ಪಾಂಡ್ಯ ಹಾಗೂ ಧವನ್ ಡ್ಯಾನ್ಸ್ ಜುಗುಲ್ ಬಂಧಿ ಟೀಂ ಇಂಡಿಯಾ ಇತರರ ಆಟಗಾರಿಗೂ ಮನರಂಜನೆ ನೀಡಿದೆ. ಜುಲೈ 03ರಿಂದ ಭಾರತ, ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ20 ಸರಣಿ ಆಡಲಿದೆ. ಬಳಿಕ 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯ ಆಡಲಿದೆ.