ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗ್ತಾರ ವಾಸಿಮ್ ಅಕ್ರಮ್?

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 27, Jul 2018, 2:57 PM IST
Wasim Akram set to be appointed as the new PCB Chairman
Highlights

ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗುತ್ತಿದ್ದಂತೆ, ಇದೀಗ ಮತ್ತೊರ್ವ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥರಾಗ್ತಾರ?  ಪಾಕಿಸ್ತಾನದಲ್ಲಿ ಈ ಪ್ರಶ್ನೆ ಉದ್ಭವಿಸಿದ್ದೇಕೆ? ಇಲ್ಲಿದೆ ವಿವರ.

ಲಾಹೋರ್(ಜು.27): ಪಾಕಿಸ್ತಾನ ನೂತನ ಪ್ರಧಾನ ಮಂತ್ರಿಯಾಗಿ ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಚುಕ್ಕಾಣಿ ಹಿಡಿದಿದ್ದಾರೆ.  ಇದರ ಬೆನ್ನಲ್ಲೇ, ಮತ್ತೊರ್ವ ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ತಂಡದ ಸದಸ್ಯ ವಾಸಿಮ್ ಅಕ್ರಮ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥರಾಗಿ ಅಧಿಕಾರ ನಿರ್ವಹಿಸೋ ಸಾಧ್ಯತೆ ಇದೆ.

ಪಿಸಿಬಿ ಮುಖ್ಯಸ್ಥರಾಗಿ ಸದ್ಯ ಸದ್ಯ ನಜೀಮ್ ಸೇಥಿ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ಶಹರ್ಯಾರ್ ಖಾನ್ ಬಳಿಕ ನಜೀಮ್ ಸೇಥಿ ಪೂರ್ಣಾವಧಿಗೆ ಪಿಸಿಬಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಇದೀಗ ನೂತನ ಪಿಸಿಬಿ  ಮುಖ್ಯಸ್ಥರಾಗಿ ವಾಸಿಮ್ ಆಕ್ರಮ್ ಆಯ್ಕೆಯಾಗೋ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ವಾಸಿಮ್ ಅಕ್ರಮ್ ಸೂಕ್ತ ಅನ್ನೋ ಅಭಿಪ್ರಾಯ ಪಾಕ್ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಪಾಕಿಸ್ತಾನದಲ್ಲಿ ನಿಂತು ಹೋಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗೆ ಮರುಜೀವ ನೀಡಲು ಅಕ್ರಮ್ ಸೂಕ್ತ ವ್ಯಕ್ತಿ ಎಂದು ಅಭಿಮಾನಿಗಳು ಸೂಚಿಸಿದ್ದಾರೆ. ಹೀಗಾಗಿ ಮುುಂಬರುವ ಪಿಸಿಬಿ ಚುನಾವಣೆ ಇದೀಗ ಕುತೂಹಲದ ಆಗರವಾಗಿದೆ.

loader