Asianet Suvarna News Asianet Suvarna News

ರೋಹಿತ್ ನಾಯಕತ್ವಕ್ಕೆ ಫುಲ್ ಮಾರ್ಕ್ಸ್ ನೀಡಿದ ಪಾಕ್ ಮಾಜಿ ನಾಯಕ!

ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ನೋಡಿದ ಮಾಜಿ ಕ್ರಿಕೆಟಿಗರು ಇದೀಗ ಏಕದಿನ ಮಾದರಿಗೆ ಕೊಹ್ಲಿ ಬದಲು ರೋಹಿತ್ ನಾಯಕತ್ವವೇ ಸೂಕ್ತ ಎಂದಿದ್ದಾರೆ. ಹಾಗಾದರೆ ರೋಹಿತ್ ನಾಯಕತ್ವ ಪರ ಬ್ಯಾಟ್ ಬೀಸುತ್ತಿರುವುದ್ಯಾರು? ಇಲ್ಲಿದೆ.
 

Wasim Akram praise Rohit sharma captaincy during Asia cup cricket
Author
Bengaluru, First Published Sep 25, 2018, 3:43 PM IST
  • Facebook
  • Twitter
  • Whatsapp

ದುಬೈ(ಸೆ.25): ಏಷ್ಯಾಕಪ್ ಟೂರ್ನಿಗೆ ತಂಡ ಪ್ರಕಟಗೊಂಡಾಗ ಎಲ್ಲರಿಗೂ ಅಚ್ಚರಿ ಕಾದಿತ್ತು. ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಲಾಗಿತ್ತು. ದ್ವಿಪಕ್ಷೀಯ ಸರಣಿಗಳಲ್ಲಿ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾಗೆ ಪ್ರತಿಷ್ಠಿತ ಟೂರ್ನಿಯಲ್ಲಿ ತಂಡವನ್ನ ಮುನ್ನಡೆಸೋ ಜವಾಬ್ದಾರಿ ನೀಡಲಾಯಿತು.  

ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ನಾಯಕತ್ವ, ಬ್ಯಾಟಿಂಗ್ ಪ್ರದರ್ಶನ ನೋಡಿದ ಮೇಲೆ ಇದೀಗ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಬದಲು ರೋಹಿತ್ ನಾಯಕತ್ವವೇ ಸೂಕ್ತ ಅನ್ನೋ ಮಾತುಗಳು ಕೇಳಿಬಂದಿದೆ. ಇದೀಗ ಪಾಕಿಸ್ತಾನ ಮಾಜಿ ನಾಯಕ ವಾಸಿಮ್ ಅಕ್ರಮ್ ಕೂಡ  ರೋಹಿತ್ ಶರ್ಮಾ ನಾಯಕತ್ವಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಜೊತೆಗೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಬೌಲರ್‌ಗಳ ರೊಟೇಶನ್, ಫೀಲ್ಡಿಂಗ್ ಬದಲಾವಣೆ ಸೇರಿದಂತೆ  ಸೂಕ್ಷ್ಮ ವಿಚಾರಗಳನ್ನೂ ರೋಹಿತ್ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದು ವಾಸಿಮ್ ಅಕ್ರಮ್ ಹೇಳಿದ್ದಾರೆ.

Follow Us:
Download App:
  • android
  • ios