ನಾನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷನಾದೆ. ಎಷ್ಟೋ ಜನರಿಗೆ 20 ವರ್ಷ ಕಾಯ್ದರೂ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ’

ಕೋಲ್ಕತಾ(.24): ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಾವು ರಾಷ್ಟ್ರೀಯ ಕೋಚ್ ಆಗಲು ಪರಿತಪ್ಪಿಸುತ್ತಿದ್ದಾಗಿ ಬಹಿರಂಗಗೊಳಿಸಿದ್ದಾರೆ. ‘ಎಂದಿಗೂ ನಮ್ಮಿಂದ ಸಾಧ್ಯವಾಗುವ ಕೆಲಸವನ್ನು ಮಾಡಬೇಕು. ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. 1999ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾನು ಉಪ ನಾಯಕ ಸಹ ಆಗಿರಲಿಲ್ಲ. ಆದರೆ ವಾಪಸಾದ ಮೂರೇ ತಿಂಗಳಲ್ಲಿ ನಾಯಕನಾದೆ.

ನಾನು ಆಡಳಿತಕ್ಕೆ ಕಾಲಿರಿಸಿದಾಗ, ಕೋಚ್ ಆಗಬೇಕು ಎಂದು ಪರಿತಪ್ಪಿಸುತ್ತಿದ್ದೆ. ಆಗ ಜಗಮೋಹನ್ ದಾಲ್ಮೀಯ ನನ್ನನ್ನು ಕರೆದು, 6 ತಿಂಗಳು ಆಡಳಿತ ನೋಡಿಕೋ ಮುಂದಕ್ಕೆ ನೋಡೋಣ ಎಂದಿದ್ದರು. ಕೆಲವೇ ದಿನಗಳಲ್ಲಿ ಅವರು ನಿಧನರಾದರು. ನಾನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷನಾದೆ. ಎಷ್ಟೋ ಜನರಿಗೆ 20 ವರ್ಷ ಕಾಯ್ದರೂ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ’ ಎಂದು ಗಂಗೂಲಿ ಹೇಳಿದ್ದಾರೆ.