ಹುಬ್ಬಳ್ಳಿ(ಸೆ.19): ಕರ್ನಾಟಕ ಪ್ರಿಮೀಯರ್ ಲೀಗ್ ನಿನ್ನೆಯ ಮೊದಲ ಪಂದ್ಯದಲ್ಲಿ ರಾಕ್ ಸ್ಟಾರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ಭರ್ಜರಿ ಜಯ ದಾಖಲಿಸಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ವಾರಿಯರ್ಸ್, ಅರ್ಜುನ್ ಅವರ ಭರ್ಜರಿ 89ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 219ರನ್ ಮಾಡಿತು.
ಈ ಗುರಿ ಬೆನ್ನತ್ತಿದ ರಾಕ್ ಸ್ಟಾರ್ಸ್ 18 ಓವರ್ಗಳಲ್ಲಿ 106ರನ್ಗಳಿಸಲಷ್ಟೆ ಶಕ್ತವಾಗಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 113ರನ್ಗಳ ಸೋಲು ಅನುಭವಿಸಿತು. ರಾಕ್ ಸ್ಟಾರ್ಸ್ ಪರ ರಾಜೀವ್ ಅರ್ಧಶತಕ ದಾಖಲಿಸಿದರು.
