ಬೃಹತ್ ಗುರಿ ಬೆನ್ನತ್ತಿದ ಕೋಲ್ಕತಾ ಪರ ರಾಬಿನ್ ಉತ್ತಪ್ಪ (53: 28 ಎಸೆತ, 4 ಬೌಂಡರಿ, 4 ಸಿಕ್ಸರ್) ಹೋರಾಟ ನಡೆಸಿದರಾದರೂ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ. ಈ ಆವೃತ್ತಿಯಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್ 5ನೇ ಅರ್ಧಶತಕ ಬಾರಿಸಿದರು. ಮನೀಶ್ ಪಾಂಡೆ (39) ರನ್ ಗಳಿಸಿದ್ದನ್ನು ಹೊರತು ಪಡಿಸಿದರೆ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಹೆಚ್ಚಿನ ಹೋರಾಟ ಕಂಡುಬರಲಿಲ್ಲ. 20 ಓವರ್ ಬ್ಯಾಟಿಂಗ್ ಮಾಡಿದ ಕೆಕೆಆರ್ 7 ವಿಕೆಟ್ ಕಳೆದುಕೊಂಡಿತು. ಸನ್‌ರೈಸರ್ಸ್‌ ಪರ ಸ್ಥಳೀಯ ಆಟಗಾರ ಮೊಹಮದ್ ಸಿರಾಜ್, ಭುವನೇಶ್ವರ್ ಹಾಗೂ ಸಿದ್ಧಾರ್ಥ್ ಕೌಲ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಹೈದರಾಬಾದ್(ಮೇ.01): ಡೇವಿಡ್ ವಾರ್ನರ್(126: 59 ಎಸೆತ, 10 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿಕ ದಾಳಿಯ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 48 ರನ್ಗಳ ಗೆಲುವು ಸಾಧಿಸಿತು. ಇಲ್ಲಿನ ರಾಜೀವ್ ಗಾಂಧಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 209 ರನ್ಗಳ ಬೃಹತ್ ಮೊತ್ತ ಪೇರಿಸಿದ್ದ ಸನ್ರೈಸರ್ಸ್, ಕೆಕೆಆರ್ ತಂಡವನ್ನು 161 ರನ್ಗಳಿಗೆ ಕಟ್ಟಿಹಾಕಿತು.
ಬೃಹತ್ ಗುರಿ ಬೆನ್ನತ್ತಿದ ಕೋಲ್ಕತಾ ಪರ ರಾಬಿನ್ ಉತ್ತಪ್ಪ (53: 28 ಎಸೆತ, 4 ಬೌಂಡರಿ, 4 ಸಿಕ್ಸರ್) ಹೋರಾಟ ನಡೆಸಿದರಾದರೂ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ. ಈ ಆವೃತ್ತಿಯಲ್ಲಿ ಕರ್ನಾಟಕದ ಬ್ಯಾಟ್ಸ್ಮನ್ 5ನೇ ಅರ್ಧಶತಕ ಬಾರಿಸಿದರು. ಮನೀಶ್ ಪಾಂಡೆ (39) ರನ್ ಗಳಿಸಿದ್ದನ್ನು ಹೊರತು ಪಡಿಸಿದರೆ ಉಳಿದ್ಯಾವ ಬ್ಯಾಟ್ಸ್ಮನ್ಗಳಿಂದಲೂ ಹೆಚ್ಚಿನ ಹೋರಾಟ ಕಂಡುಬರಲಿಲ್ಲ. 20 ಓವರ್ ಬ್ಯಾಟಿಂಗ್ ಮಾಡಿದ ಕೆಕೆಆರ್ 7 ವಿಕೆಟ್ ಕಳೆದುಕೊಂಡಿತು. ಸನ್ರೈಸರ್ಸ್ ಪರ ಸ್ಥಳೀಯ ಆಟಗಾರ ಮೊಹಮದ್ ಸಿರಾಜ್, ಭುವನೇಶ್ವರ್ ಹಾಗೂ ಸಿದ್ಧಾರ್ಥ್ ಕೌಲ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ಗೆ ವಾರ್ನರ್ ಸ್ಫೋಟಕ ಆರಂಭ ನೀಡಿದರು. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, 43 ಎಸೆತಗಳಲ್ಲಿ ಶತಕ ಬಾರಿಸಿದರು. ಮೊದಲ 10 ಓವರ್ಗಳಲ್ಲಿ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 123 ರನ್ ಗಳಿಸಿತ್ತು. ಕೇನ್ ವಿಲಿಯಮ್ಸನ್(40: 25 ಎಸೆತ, 5 ಬೌಂಡರಿ) ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಲವಾಗಿ ತಂಡ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.
ವಾರ್ನರ್ ವೀರಾವೇಶಕ್ಕೆ ಕೆಕೆಆರ್ ಸುಸ್ತು!
ಐಪಿಎಲ್ನ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಡೇವಿಡ್ ವಾರ್ನರ್ ಚುಟುಕು ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ ಇಲ್ಲಿ ನಡೆದ ಪಂದ್ಯದಲ್ಲಿ ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡಿದ ವಾರ್ನರ್, ಐಪಿಎಲ್ನಲ್ಲಿ 3ನೇ ಶತಕ ದಾಖಲಿಸಿದರು.
ತವರಿನ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಇಳಿದ ವಾರ್ನರ್ಗೆ ಕೆಕೆಆರ್ನ ಯಾವ ಬೌಲರ್ ಸಹ ಪ್ರಬಲ ಪೈಪೋಟಿ ನೀಡಲಿಲ್ಲ. ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸನ್ರೈಸರ್ಸ್ ನಾಯಕ, 43 ಎಸೆತಗಳಲ್ಲಿ ಶತಕ ಪೂರೈಸಿದರು. ಗಂಭೀರ್ ಪಡೆಯ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ವಾರ್ನರ್, 59 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್ಗಳ ನೆರವಿನಿಂದ 126 ರನ್ ಸಿಡಿಸಿ ಕ್ರಿಸ್ ವೋಕ್ಸ್ಗೆ ವಿಕೆಟ್ ನೀಡಿದರು. ವಾರ್ನರ್ ಔಟಾದಾಗ ಸನ್ರೈಸರ್ಸ್ ಇನ್ನಿಂಗ್ಸ್ನಲ್ಲಿ ಇನ್ನೂ 22 ಎಸೆತ ಬಾಕಿ ಇತ್ತು. ಒಂದೊಮ್ಮೆ ಅವರು ಇನ್ನಿಂಗ್ಸ್ ಕೊನೆವರೆಗೂ ಕ್ರೀಸ್ನಲ್ಲಿ ಇದ್ದಿದ್ದರೆ 150ಕ್ಕಿಂತಲೂ ಹೆಚ್ಚು ರನ್ ಗಳಿಸಲು ಸಾಧ್ಯವಾಗುತ್ತಿತ್ತು. 126 ರನ್ ಗಳಿಸುವ ಮೂಲಕ ವಾರ್ನರ್, ಐಪಿಎಲ್ನಲ್ಲಿ ಗರಿಷ್ಠ ರನ್ ಬಾರಿಸಿದ ನಾಯಕ ಎನ್ನುವ ದಾಖಲೆ ನಿರ್ಮಿಸಿದರು. 20 ಓವರ್ಗಳಲ್ಲಿ ಸನ್ರೈಸರ್ಸ್ 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.
ಸ್ಕೋರ್
ಸನ್'ರೈಸರ್ಸ್ ಹೈದರಾಬಾದ್: 209/3 (20/20 )
ಕೋಲ್ಕತ್ತಾ ನೈಟ್ ರೈಡರ್ಸ್: 161/7(20/20)
ಪಂದ್ಯ ಶ್ರೇಷ್ಠ: ಡೇವಿಡ್ ವಾರ್ನ್'ರ್
