ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಧ್ಯಮ ಜೊತೆ ಮಾತನಾಡಿದ್ದಾರೆ. ತಂಡದ ಗುರಿ, ಹಾಗೂ ಗೇಮ್ ಪ್ಲಾನ್ ಕುರಿತು ವಿರಾಟ್ ಕೊಹ್ಲಿ ಹೇಳಿದ್ದೇನು? ಇಲ್ಲಿದೆ ನೋಡಿ.
ಒಲ್ಡ್ ಟ್ರಾಫೋರ್ಡ್(ಜು.02): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಒಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಕೊಹ್ಲಿ, ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ವೈಯುಕ್ತಿ ದಾಖಲೆಗಳಿಗಿಂತ ತಂಡದ ಗೆಲುವು ಮುಖ್ಯ. ಹೀಗಾಗಿ ಟೀಂ ಇಂಡಿಯಾ ಸಂಘಟಿತ ಹೋರಾಟ ನೀಡಲಿದೆ. ಈ ಮೂಲಕ ಸರಣಿ ಗೆಲುವಿನ ಗುರಿ ಹೊಂದಿದ್ದೇವೆ ಎಂದರು. ಇಂಜುರಿಯಿಂದಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ತಂಡ ಅಷ್ಟೇ ಬಲಶಾಲಿಯಾಗಿದೆ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ನಾಳೆ(ಜೂ.03) ಆರಂಭಗೊಳ್ಳಲಿದೆ.ಇಂಗ್ಲೆಂಡ್ ವಿರುದ್ಧ ಕೊಹ್ಲಿ ಸೈನ್ಯ 3 ಟಿ20, 3ಏಕದಿನ ಹಾಗೂ 5 ಟೆಸ್ಟ್ ಪಂದ್ಯ ಸರಣಿ ಆಡಲಿದೆ. ಸರಣಿಗೂ ಮುನ್ನ ನಾಯಕ ಕೊಹ್ಲಿ ಹಾಗೂ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಟ್ರೋಫಿ ಜೊತೆ ಫೋಟೋಗೆ ಫೋಸ್ ನೀಡಿದರು.
