ಪಾಕಿಸ್ತಾನ ಪರ 23 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಿರುವ ಆಝಮ್, ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಸೆಳೆದಿದ್ದಾರೆ.
ಕರಾಚಿ(ಮಾ.14): ಭಾರತ ತಂಡದ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸುವಂತೆ ಪಾಕಿಸ್ತಾನ ತಂಡದ ಏಳಿಗೆಗಾಗಿ ಕೊಹ್ಲಿಯನ್ನು ಹಿಂಬಾಲಿಸುವೆ ಎಂದು ಯುವ ಬ್ಯಾಟ್ಸ್‌ಮನ್ ಬಾಬರ್ ಆಝಮ್ ಹೇಳಿದ್ದಾರೆ.
‘‘ಕೊಹ್ಲಿ ಆಟಕ್ಕೂ ನನ್ನ ಆಟಕ್ಕೂ ಹೋಲಿಕೆ ಮಾಡಲು ಸಾಧ್ಯವಾಗದೆ ಇರಬಹುದು, ಆದರೆ ಅವರ ಶೈಲಿಯನ್ನು ಅನುಕರಿಸಲು ನಾನು ಪ್ರಯತ್ನಿಸುತ್ತಿದ್ದೇನೆ’’ ಎಂದು ಬಾಬರ್ ಹೇಳಿದ್ದಾರೆ.
‘‘ಒತ್ತಡದ ಸಂದರ್ಭದಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಸಿಗುವ ಖುಷಿಯನ್ನು ಬಣ್ಣಿಸಲು ಸಾಧ್ಯವಿಲ್ಲ’ ಎಂದು ಇದೇವೇಳೆ ಬಾಬರ್ ಹೇಳಿದ್ದಾರೆ.
ಪಾಕಿಸ್ತಾನ ಪರ 23 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಿರುವ ಆಝಮ್, ಸ್ಥಿರ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಸೆಳೆದಿದ್ದಾರೆ.