Asianet Suvarna News Asianet Suvarna News

ಎಟಿಎಂ ಬೆಳಕಲ್ಲಿ ಮಕ್ಕಳಿಗೆ ಶಿಕ್ಷಣ-ಸೆಕ್ಯೂರಿಟಿ ಗಾರ್ಡ್‌ಗೆ ಕಾರ್ಯಕ್ಕೆ ಲಕ್ಷ್ಮಣ್ ಸಲಾಮ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ , ಡೆಹ್ರಡೂನ್ ಎಟಿಂ ಸೆಕ್ಯೂರಿಟಿ ಗಾರ್ಡ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಲಕ್ಷ್ಮಣ್ ಮನಸ್ಸು ತಟ್ಟಿದ ಈ ಸೆಕ್ಯೂರಿಟಿ ಗಾರ್ಡ್ ಯಾರು? ಆತನ ಸಾಧನೆ ಏನು? ಇಲ್ಲಿದೆ.

VVS Laxman salute atm security guard for his social service
Author
Bengaluru, First Published Aug 24, 2018, 5:33 PM IST

ಹೈದರಾಬಾದ್(ಆ.24): ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾ, ಹತ್ತಿದರ ಸ್ಲಂ ನಿವಾಸಿಗಳ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸೆಕ್ಯೂರಿಟಿಗೆ ಗಾರ್ಡ್ ಕಾರ್ಯಕ್ಕೆ ಇಡೀ ದೇಶವೆ ಮೆಚ್ಚುಗೆ ವ್ಯಕ್ತಪಡಿಸಿದೆ.  ಇದೀಗ ಈ ಮಾಜಿ ಸೈನಿಕನ ಕಾರ್ಯಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸಲಾಮ್ ಹೇಳಿದ್ದಾರೆ.

 

 

ಡೆಹ್ರಡೂನ್‌ನಲ್ಲಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವ ಬ್ರಿಜೇಂದ್ರ ಸಿಂಗ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದೀಗ ತಮ್ಮ ಎಟಿಂ ಸೆಕ್ಯೂರಿಟಿ ಗಾರ್ಡ್ ಕೆಲಸದ ವೇಳೆ ಹತ್ತಿರದ ಸ್ಲಂ ನಿವಾಸಿಗಳ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಎಟಿಎಂ ಬೆಳಕಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿರುವ ಬ್ರಿಜೇಂದ್ರ ಸಿಂಗ್ ಕಾರ್ಯವನ್ನ ವಿವಿಎಸ್ ಲಕ್ಷ್ಮಣ್ ಕೊಂಡಾಡಿದ್ದಾರೆ.  ಸೇನೆಯಿಂದ ನಿವೃತ್ತರಾದರೂ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಇವರೇ ನಿಜವಾದ ಹೀರೋ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ಲಕ್ಷ್ಮಣ್ ಬ್ರಿಜೇಂದ್ರ ಸಿಂಗ್ ಕುರಿತು ಟ್ವೀಟ್ ಮಾಡುತ್ತಿದ್ದಂತೆ, ಇಡೀ ದೇಶವೇ ನಿವೃತ್ತ ಸೈನಿಕನಿಗೆ ಸಲಾಮ್ ಹೇಳಿದೆ. ಮಕ್ಕಳಿಗೆ ಶಿಕ್ಷಣ ನೀಡೋ ಜೊತೆಗೆ ತಮ್ಮ ಕೆಲಸವನ್ನು ನಿರ್ವಹಿಸುತ್ತಿರುವ ಮಾಜಿ ಸೈನಿಕ ದೇಶದ ಹೀರೋ ಎಂದು ಬಣ್ಣಿಸಿದ್ದಾರೆ.

 

 

 

 

Follow Us:
Download App:
  • android
  • ios