ಜಿಂಬಾಬ್ವೆ ಪರ 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿರುವ ವೆಟೋರಿ, ಇಲ್ಲಿಯವರೆಗೆ ನಾಲ್ಕು ಟೆಸ್ಟ್, 20 ಏಕದಿನ ಹಾಗೂ 11 ಟಿ20 ಪಂದ್ಯಗಳನ್ನು ಆಡಿದ್ದಾರೆ.

ದುಬೈ(ಡಿ.27): ಜಿಂಬಾಬ್ವೆ ತಂಡದ ಯುವ ವೇಗದ ಬೌಲರ್ ಬ್ರಿಯಾನ್ ವೆಟೋರಿ ವಿವಾದಾತ್ಮಕ ಬೌಲಿಂಗ್ ಶೈಲಿಯಿಂದ 1 ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

ಕಳೆದ ತಿಂಗಳಷ್ಟೇ ಶ್ರೀಲಂಕಾ ವಿರುದ್ಧದ ತ್ರಿಕೋನ ಏಕದಿನ ಸರಣಿಯಲ್ಲಿ ವೆಟೋರಿ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆ ಎದ್ದಿತ್ತು. ಈ ಸಂಬಂಧ ವೆಟೋರಿ ಅವರನ್ನು ಡಿ.12ರಂದು ಪ್ರೆಟೋರಿಯಾ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು ವಿವಾದಾತ್ಮಕ ಶೈಲಿ ಹೊಂದಿರುವುದು ಸಾಭೀತಾಗಿದ್ದರಿಂದ ನಿಷೇಧ ಹೇರಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಂಬಾಬ್ವೆ ಪರ 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್'ಗೆ ಪಾದಾರ್ಪಣೆ ಮಾಡಿರುವ ವೆಟೋರಿ, ಇಲ್ಲಿಯವರೆಗೆ ನಾಲ್ಕು ಟೆಸ್ಟ್, 20 ಏಕದಿನ ಹಾಗೂ 11 ಟಿ20 ಪಂದ್ಯಗಳನ್ನು ಆಡಿದ್ದಾರೆ.

ವಿವಾದಾತ್ಮಕ ಬೌಲಿಂಗ್ ಶೈಲಿ ಹೊಂದಿರುವ ಕಾರಣ ವೆಟೋರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬೌಲಿಂಗ್ ಮಾಡದಿರಲು ತಾಕೀತು ಮಾಡಿದೆ.