ಲಂಡನ್(ಡಿ.20): ಭಾರತದ ಸ್ಟಾರ್ ಚೆಸ್ ಆಟಗಾರ ವಿಶ್ವನಾಥನ್ ಆನಂದ್ (5), ಲಂಡನ್ ಚೆಸ್ ಕ್ಲಾಸಿಕ್ ಟೂರ್ನಿಯಲ್ಲಿ ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ (5) ಎದುರಿನ 2ನೇ ಮತ್ತು ಕೊನೆಯ ಸುತ್ತಿನಲ್ಲಿ ಡ್ರಾ ಸಾಧಿಸಿದರು.

ಇದರೊಂದಿಗೆ ಆನಂದ್, ಅಮೆರಿಕದ ಹಿಕಾರು ನಕಾಮುರ (5) ಮತ್ತು ರಷ್ಯಾದ ವ್ಲಾದಿಮಿರ್ ತಲಾ 5 ಅಂಕಗಳೊಂದಿಗೆ ಜಂಟಿ ಮೂರನೇ ಸ್ಥಾನ ಪಡೆದರು.

ಇನ್ನು ಅಮೆರಿಕದ ಚದುರಂಗ ಪಟು ವೇಸ್ಲೆ ಸೋ (6) ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದರು.

‘‘ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಸಂತಸವಾಗಿದೆ. ಮುಂದಿನ ವಿಶ್ವಕಪ್ ಚೆಸ್ ಟೂರ್ನಿಯನ್ನು ಎದುರು ನೋಡುತ್ತಿದ್ದು, ಪ್ರಭಾವಿ ಪ್ರದರ್ಶನದ ವಿಶ್ವಾಸದಲ್ಲಿದ್ದೇನೆ’’ ಎಂದು ಆನಂದ್ ಹೇಳಿದರು.