ಸೇಂಟ್ ಲೂಯಿಸ್(ಆ.10): ಭಾರತದ ಅನುಭವಿ ಗ್ರ್ಯಾಂಡ್‌'ಮಾಸ್ಟರ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ ಸಿಂಕ್‌'ಫೀಲ್ಡ್ ಕಪ್ ಚೆಸ್ ಟೂರ್ನಿಯ 7ನೇ ಸುತ್ತಿನಲ್ಲಿ ರಷ್ಯಾದ ಇಯಾನ್ ನೆಪೊಮ್ನಿಯಾಚಿ ವಿರುದ್ಧ ಗೆಲುವು ಸಾಧಿಸಿದ್ದು, ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.

ಪಂದ್ಯಾವಳಿಯಲ್ಲಿ ಆನಂದ್ ಗಳಿಸುತ್ತಿರುವ 2ನೇ ಗೆಲುವು ಇದಾಗಿದೆ.

ಟೂರ್ನಿಯಲ್ಲಿ ಸದ್ಯ 5 ಡ್ರಾ ಹಾಗೂ 2 ವಿಜಯ ಸಾಧಿಸಿರುವ ಆನಂದ್ ಒಟ್ಟು 4.5 ಅಂಕ ಗಳಿಸಿದ್ದು, ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ.