ಬಾಲಂಗೋಚಿಗಳನ್ನು ಭುವನೇಶ್ವರ್ ಕುಮಾರ್ ಬಲಿ ಪಡೆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದ ಎಬಿ ಡಿವಿಲಿಯರ್ಸ್ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಭಾರತ ಪರ ಬುಮ್ರಾ ಹಾಗೂ ಶಮಿ ತಲಾ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಹಾಗೂ ಪಾಂಡ್ಯ ತಲಾ 2 ವಿಕೆಟ್ ಹಂಚಿಕೊಂಡರು.

ಕೇಪ್'ಟೌನ್(ಜ.08): ಟೀಂ ಇಂಡಿಯಾ ಬೌಲರ್ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ಆಪ್ರಿಕಾವನ್ನು ಕೇವಲ 130 ರನ್'ಗಳಿಗೆ ಕಟ್ಟಿಹಾಕಿದೆ. ಇದೀಗ ವಿರಾಟ್ ಕೊಹ್ಲಿ ಪಡೆ ಮೊದಲ ಟೆಸ್ಟ್ ಗೆಲ್ಲಲು 208 ರನ್'ಗಳ ಗುರಿ ಸಿಕ್ಕಿದೆ.

ಎರಡನೇ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 65 ರನ್ ಬಾರಿಸಿತ್ತು. ಇನ್ನು ಮೂರನೇ ದಿನದಾಟ ಒಂದೂ ಎಸೆತ ಕಾಣದೇ ಅಂತ್ಯ ಕಂಡಿತ್ತು. ಹಾಗಾಗಿ ನಾಲ್ಕನೇ ದಿನ ಬೃಹತ್ ಮೊತ್ತ ಕಲೆ ಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಹರಿಣಗಳ ಈ ಪ್ರಯತ್ನಕ್ಕೆ ಟೀಂ ಇಂಡಿಯಾ ವೇಗಿಗಳು ಅವಕಾಶ ಮಾಡಿಕೊಡಲಿಲ್ಲ. ಆರಂಭದಲ್ಲೇ ಹಾಶೀಂ ಆಮ್ಲಾ ಅವರನ್ನು ಪೆವಿಲಿಯನ್'ಗೆ ಅಟ್ಟಿದ ಶಮಿ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಇದರ ಬೆನ್ನಲ್ಲೇ ನೈಟ್ ವಾಚ್'ಮನ್ ರಬಾಡ ಕೂಡಾ ಆಮ್ಲಾ ಹಾದಿಯನ್ನೇ ಅನುಸರಿಸಿದರು. ಇನ್ನು ಮೊದಲ ಇನಿಂಗ್ಸ್'ನಲ್ಲಿ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದ ನಾಯಕ ಫಾಪ್ ಡು ಪ್ಲೆಸಿಸ್ ಶೂನ್ಯ ಸುತ್ತಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.

ಬಾಲಂಗೋಚಿಗಳನ್ನು ಭುವನೇಶ್ವರ್ ಕುಮಾರ್ ಬಲಿ ಪಡೆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡುವ ಪ್ರಯತ್ನ ಮಾಡಿದ ಎಬಿ ಡಿವಿಲಿಯರ್ಸ್ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಭಾರತ ಪರ ಬುಮ್ರಾ ಹಾಗೂ ಶಮಿ ತಲಾ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಹಾಗೂ ಪಾಂಡ್ಯ ತಲಾ 2 ವಿಕೆಟ್ ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 286&130

ಎಬಿ ಡಿವಿಲಿಯರ್ಸ್: 35

ಶಮಿ 28/3

(* ಊಟದ ವಿರಾಮದ ಅಂತ್ಯಕ್ಕೆ)