5ನೇ ದಿನದಾಟದಲ್ಲಿ ಆಂಗ್ಲರ ಗೆಲುವಿಗೆ 318 ರನ್ ಅಗತ್ಯವಿದೆ.ಭಾರತದ ಗೆಲುವಿಗೆ 8 ವಿಕೆಟ್ ಕೀಳುವ ಅಗತ್ಯವಿದೆ. ಭಾರತೀಯ ಬೌಲರ್`ಗಳು ಚುರುಕಿನ ದಾಳಿ ನಡೆಸಬೇಕಿದೆ. ಹೀಗಾಗಿ, 5ನೇ ದಿನದ ಆಟ ಭಾರೀ ಕುತೂಹಲ ಕೆರಳಿಸಿದೆ.

ವಿಶಾಖಪಟ್ಟಣ(ನ.20): ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. 2ನೇ ಇನ್ನಿಂಗ್ಸ್`ನಲ್ಲಿ ಭಾರತ ನೀಡಿದ 405 ರನ್`ಗಳ ಗೆಲುವಿನ ಗುರಿ ಬೆನ್ನತ್ತಿರುವ ಆಂಗ್ಲರು ಆರಂಭದಲ್ಲಿ ಸ್ಥಿರ ಪ್ರದರ್ಶನ ನೀಡಿದರಾದರೂ ಬಳಿಕ 2 ವಿಕೆಟ್ ಕಳೆದುಕೊಂಡಿದ್ಧಾರೆ,

ಭಾರತದ ಸ್ಪಿನ್ ಮತ್ತು ವೇಗದ ದಾಳಿಯನ್ನ ಯಶಸ್ವಿಯಾಗಿ ಎದುರಿಸಿದ ನಾಯಕ ಕುಕ್ ಮತ್ತು ಹಮೀದ್ ಜೋಡಿ 74 ರನ್`ಗಳ ಜೊತೆಯಾಟವಾಡಿದರು. ಈ ಇಬ್ಬರ ಬ್ಯಾಟಿಂಗ್ ಶೈಲಿ ಅಕ್ಷರಶಃ ಭಾರತ ತಂಡದಲ್ಲಿ ನಡುಕ ಹುಟ್ಟಿಸಿದ್ದು ಸುಳ್ಳಲ್ಲ. ಬಳಿಕ ಅಶ್ವಿನ್ ಹಮೀದ್`ಗೆ ಪೆವಿಲಿಯನ್ ದಾರಿ ತೋರಿಸುವ ಮೂಲಕ ಆಂಗ್ಲರ ಪತನಕ್ಕೆ ನಾಂದಿ ಹಾಡಿದರು. ಕುಕ್ ಸಹ ಜಡೇಜಾಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. 4ನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ 2 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ. ಆಂಗ್ಲರ ಗೆಲುವಿಗೆ 318 ರನ್ ಅಗತ್ಯವಿದೆ.ಭಾರತದ ಗೆಲುವಿಗೆ 8 ವಿಕೆಟ್ ಕೀಳುವ ಅಗತ್ಯವಿದೆ. ನಾಳೆ ಕೊನೆಯ ದಿನವಾಗಿದ್ದು ಭಾರತೀಯ ಬೌಲರ್`ಗಳು ಚುರುಕಿನ ದಾಳಿ ನಡೆಸಬೇಕಿದೆ. ಹೀಗಾಗಿ, 5ನೇ ದಿನದ ಆಟ ಭಾರೀ ಕುತೂಹಲ ಕೆರಳಿಸಿದೆ.

ಸಂಕ್ಷಿಪ್ತ ಸ್ಕೋರ್:

- ಭಾರತ - 455 ಮತ್ತು 204

- ಇಂಗ್ಲೆಂಡ್ : 255 ಮತ್ತು 4ನೇ ದಿನದಾಟದಂತ್ಯಕ್ಕೆ 87/2

- 318 ರನ್ ಹಿನ್ನಡೆಯಲ್ಲಿ ಇಂಗ್ಲೆಂಡ್