2018 ರ ಮೊದಲ ಸರಣಿಯನ್ನಾಡಲು ಭಾರತ ಕ್ರಿಕೆಟ್ ತಂಡ ಗುರುವಾರ ಬೆಳಗ್ಗಿನ ಜಾವ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಹತ್ತಿತು.
ಮುಂಬೈ (ಡಿ.29): 2018 ರ ಮೊದಲ ಸರಣಿಯನ್ನಾಡಲು ಭಾರತ ಕ್ರಿಕೆಟ್ ತಂಡ ಗುರುವಾರ ಬೆಳಗ್ಗಿನ ಜಾವ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಹತ್ತಿತು.
ಡಿ.11 ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ತಂಡದ ನಾಯಕ ವಿರಾಟ್ ಕೊಹ್ಲಿ ಜತೆ ಅವರ ಪತ್ನಿ ಅನುಷ್ಕಾ ಶರ್ಮಾ ಸಹ ಆಫ್ರಿಕಾಕ್ಕೆ ತೆರಳಿದರು. ಮದುವೆಗೂ ಮೊದಲೇ ಅನುಷ್ಕಾ , ದಕ್ಷಿಣ ಆಫ್ರಿಕಾ ವೀಸಾ ಪಡೆದಿದ್ದರು ಎಂದು ಸುದ್ದಿಯಾಗಿತ್ತು. ನಾಯಕ ಕೊಹ್ಲಿ ಪಾಲಿಗೆ ಇದು ಅತ್ಯಂತ ಮಹತ್ವದ ಪ್ರವಾಸವಾಗಿದೆ. ಮದುವೆಗೂ ಮುನ್ನ ಅನೇಕ ಪ್ರವಾಸಗಳಲ್ಲಿ ಕೊಹ್ಲಿ ಜತೆ ಅನುಷ್ಕಾ ಕಾಣಿಸಿಕೊಂಡಿದ್ದರು.2014 ರಲ್ಲಿ ಅವರು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗಲೂ, ಅನುಷ್ಕಾ ಜತೆಗಿದ್ದರು. ಜ.5 ರಿಂದ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಬಳಿಕ 6 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಆಫ್ರಿಕಾದಲ್ಲಿ ನೆಟ್ಸ್ ಅಭ್ಯಾಸಕ್ಕಾಗಿ ನಾಲ್ವರು ಯುವ ವೇಗದ ಬೌಲರ್'ಗಳನ್ನು ಕೊಹ್ಲಿ ಪಡೆ ತನ್ನೊಂದಿಗೆ ಆಫ್ರಿಕಾಕ್ಕೆ ಕರೆದೊಯ್ದಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದು, ಮೊದಲ ಟೆಸ್ಟ್'ನಲ್ಲಿ ಆಡುವುದು ಅನುಮಾನವಾಗಿದೆ.
