Asianet Suvarna News Asianet Suvarna News

ಸೆಹ್ವಾಗ್ ಪತ್ನಿಗೆ 4.5 ಕೋಟಿ ರೂ ವಂಚಿಸಿದ ಬಿಸ್‌ನೆಸ್ ಪಾರ್ಟ್ನರ್!

ವಿರೇಂದ್ರೆ ಸೆಹ್ವಾಗ್ ಪತ್ನಿಗೆ ತಮ್ಮ ಉದ್ಯಮಿ ಪಾಲುದಾರರೇ ವಂಚಿಸಿದ್ದಾರೆ. ಒಂದಲ್ಲ, ಎರಡಲ್ಲ, ಬರೊಬ್ಬರಿ 4.5 ಕೋಟಿ ರೂಪಾಯಿ ವಂಚಿಸಿದ್ದಾರೆ. ಈ ವಂಚನೆ ನಡೆದ್ದು ಹೇಗೆ? ಇಲ್ಲಿದೆ ವಿವರ.

Virender Sehwag wife has filed cheating case against her business partners
Author
Bengaluru, First Published Jul 13, 2019, 8:55 PM IST
  • Facebook
  • Twitter
  • Whatsapp

ದೆಹಲಿ(ಜು.13): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪತ್ನಿಗೆ ಉದ್ಯಮಿ ಪಾಲುದಾರರೇ ವಂಚಿಸಿದ್ದಾರೆ. ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ಸಹಿ ನಕಲು ಮಾಡಿ ಬರೊಬ್ಬರಿ 4.5 ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾರೆ. ಇದೀಗ ಆರತಿ ಸೆಹ್ವಾಗ್ ದೆಹಲಿ ಪೊಲೀಸರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಧೋನಿ ಹುಟ್ಟುಹಬ್ಬದಂದೇ ಗಾಳಿ ಸುದ್ದಿಗೆ ತೆರೆ ಎಳೆದ ಸೆಹ್ವಾಗ್..!

ಆರತಿ ಸೆಹ್ವಾಗ್ ಉದ್ಯಮಿ ಪಾಲುದಾರರು ಸಾಲಗಾರರಿಂದ 4.5ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಸಾಲ ಪಡೆಯಲು ಆರತಿ ಸೆಹ್ವಾಗ್ ಸಹಿಯನ್ನು ನಕಲು ಮಾಡಿದ್ದಾರೆ. ಇಷ್ಟೇ ಅಲ್ಲ ವಿರೇಂದ್ರ ಸೆಹ್ವಾಗ್ ಹೆಸರು ಹೇಳಿ ಸಾಲಗಾರಿಂದ ಹೆಚ್ಚಿನ ದಾಖಲೆ ಸಲ್ಲಿಸದೆ ಸಾಲ ಪಡೆಯಲಾಗಿದೆ. ಬಳಿಕ ಸಾಲ ಮರುಪಾವತಿಸದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಇದನ್ನೂ ಓದಿ: ಧೋನಿಗೆ 2-3 ಪಂದ್ಯಗಳಿಗೆ ನಿಷೇಧ ಹೇರಬೇಕಿತ್ತು ಎಂದ ಸೆಹ್ವಾಗ್‌..!

ಸಾಲ  ಮರುಪಾವತಿಸದಿದ್ದಾಗ  ಸಾಲಗಾರರು ಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆ ವೇಳೆ ಸೆಹ್ವಾಗ್ ಪತ್ನಿ ಸಹಿ ಇರುವುದಾಗಿ ತಿಳಿಸಿದ್ದಾರೆ. ಆಶ್ಚರ್ಯಗೊಂಡ ಸೆಹ್ವಾಗ್ ಕುಟುಂಬ ತಕ್ಷಣವೇ ಪೊಲೀಸರಿಗೆ ದೂರು ನೀಡಿದೆ. ತಾನು ಯಾವುದೇ ಸಹಿ ಮಾಡಿಲ್ಲ. ಈ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸಲು ಆರತಿ ಸೆಹ್ವಾಗ್ ಕೋರಿದ್ದಾರೆ.
 

Follow Us:
Download App:
  • android
  • ios