ಸೆಹ್ವಾಗ್ ಅಭಿನಂದನೆಗೆ ಧನ್ಯವಾದ ಅರ್ಪಿಸಿದ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ ರೆಡ್ಡಿ, ಹ್ಯಾಶ್ ಟ್ಯಾಗ್ ಬಗ್ಗೆ ತೀವ್ರ ಆಕ್ಷೇಪ‌ ವ್ಯಕ್ತಪಡಿಸಿದ್ದಾರೆ.
ನವದೆಹಲಿ(ಫೆ.14): ಅಂಧರ ಟಿ20 ವಿಶ್ವಕಪ್ ಗೆದ್ದ ತಂಡವನ್ನು ಅಭಿನಂದಿಸುವ ಭರದಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾಡಿರುವ ಎಡವಟ್ಟು ಅಂಧರ ತಂಡದ ಕ್ಯಾಪ್ಟನ್ ಅಜಯ್ ರೆಡ್ಡಿಗೆ ಇರಿಸುಮುರುಸು ಉಂಟು ಮಾಡಿದೆ.
ವಿಶ್ವಕಪ್ ಗೆದ್ದ ತಂಡವನ್ನು ಟ್ವೀಟರ್'ನಲ್ಲಿ ಅಭಿನಂದಿಸುವಾಗ ಸೆಹ್ವಾಗ್ #OtherMenInBlue ಎಂಬ ಹ್ಯಾಶ್ ಟ್ಯಾಗನ್ನು ಬಳಸಿದ್ದರು.
ಸೆಹ್ವಾಗ್ ಅಭಿನಂದನೆಗೆ ಧನ್ಯವಾದ ಅರ್ಪಿಸಿದ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ ರೆಡ್ಡಿ, ಹ್ಯಾಶ್ ಟ್ಯಾಗ್ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಾವು ಕೂಡಾ ಅದೇ ನೀಲಿ ಬಣ್ಣದ ಜೆರ್ಸಿಯನ್ನು ಧರಿಸುತ್ತೇವೆ. ಅದೇ ತ್ರಿವರ್ಣವನ್ನು ಪ್ರತಿನಿಧಿಸುತ್ತೇವೆ. ಅದೇ ಗೌರವ ಹಾಗೂ ಹುಮ್ಮಸ್ಸಿನಿಂದ ಆಡುತ್ತೇವೆ. ಆದರೂ ನಮ್ಮನ್ನೇಕೆ Other ಎಂದು ಭಾವಿಸಲಾಗುತ್ತದೆ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.
