ಸಚಿನ್ ಉಡುಗೊರೆ ನೀಡಿರುವ ವಿಷಯವನ್ನು ಟ್ವೀಟ್ ಮಾಡಿರುವ ಸೆಹ್ವಾಗ್, ಸಚಿನ್’ಗೆ ಧನ್ಯವಾದ ಅರ್ಪಿಸಿದ್ದಾರೆ.
ನವದೆಹಲಿ(ಸೆ.28): ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್’ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯೂ 7 ಸೀರಿಸ್’ಗೆ ಸೇರಿದ 1.14 ಕೋಟಿ ರು ಮೌಲ್ಯದ ಬಿಎಂಡಬ್ಲ್ಯೂ 730 ಎಲ್’ಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸಚಿನ್ ಉಡುಗೊರೆ ನೀಡಿರುವ ವಿಷಯವನ್ನು ಟ್ವೀಟ್ ಮಾಡಿರುವ ಸೆಹ್ವಾಗ್, ಸಚಿನ್’ಗೆ ಧನ್ಯವಾದ ಅರ್ಪಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರರಾದ ಇಬ್ಬರು ದೀರ್ಘಕಾಲದಿಂದ ಉತ್ತಮ ಗೆಳೆಯರಾಗಿದ್ದಾರೆ. ಇದೀಗ ಸಚಿನ್ ದುಬಾರಿ ಕಾರೊಂದನ್ನು ಡೆಲ್ಲಿ ಸ್ನೇಹಿತನಿಗೆ ನೀಡಿದ್ದಾರೆ.