ಫ್ರಾನ್ಸ್, ಇಂಗ್ಲೆಂಡ್, ಕ್ರೊವೇಷಿಯಾ ತಂಡಗಳನ್ನು ಮರೆತು ಬಿಟ್’ಹಾಕಿ ಈತನನ್ನು ನೋಡಿ ಎಂದು ವ್ಯಕ್ತಿಯೊಬ್ಬ ಫುಟ್ಬಾಲ್’ವೊಂದನ್ನು ಸಣ್ಣ ಕಿಂಡಿಗೆ ಯಶಸ್ವಿಯಾಗಿ ತೂರಿಸುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವದೆಹಲಿ[ಜು.11]: ಇದೀಗ ಜಗತ್ತಿನಾದ್ಯಂತ ಫುಟ್ಬಾಲ್ ಕ್ರೇಜ್ ಜೋರಾಗಿದ್ದು, 2018ನೇ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ತಂಡ ಫೈನಲ್ ಪ್ರವೇಶಿಸಿದೆ. ಇಂದು ಅಂತಿಮ ಸುತ್ತಿಗಾಗಿ ಇಂಗ್ಲೆಂಡ್ ಹಾಗೂ ಕ್ರೊವೇಷಿಯಾ ತಂಡಗಳು ಸೆಣಸಲಿವೆ.
ಸದಾ ಒಂದಿಲ್ಲೊಂದು ಟ್ವೀಟ್ ಮೂಲಕ ಸದ್ದು ಮಾಡುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಇಂದು ಹೊಸ ಫುಟ್ಬಾಲ್ ಪ್ರತಿಭೆಯೊಂದನ್ನು ಹುಡುಕಿದ್ದಾರೆ.
ಫ್ರಾನ್ಸ್, ಇಂಗ್ಲೆಂಡ್, ಕ್ರೊವೇಷಿಯಾ ತಂಡಗಳನ್ನು ಮರೆತು ಬಿಟ್’ಹಾಕಿ ಈತನನ್ನು ನೋಡಿ ಎಂದು ವ್ಯಕ್ತಿಯೊಬ್ಬ ಫುಟ್ಬಾಲ್’ವೊಂದನ್ನು ಸಣ್ಣ ಕಿಂಡಿಗೆ ಯಶಸ್ವಿಯಾಗಿ ತೂರಿಸುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆಯಷ್ಟೇ ಸೆಹ್ವಾಗ್ ಸುನೀಲ್ ಗವಾಸ್ಕರ್’ಗೆ ವಿನೂತನವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.