ಸಾಮಾಜಿಕ ಜಾಲತಾಣದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್‌ಗಳು ಸಾಕಷ್ಟು ಸಂಚಲನ ಮೂಡಿಸಿದೆ. ಇದೀಗ ಸೆಹ್ವಾಗ್ ಮಾಡಿರುವ ಟ್ವೀಟ್ ಮತ್ತೊಮ್ಮೆ ದೇಶದ ಜನರನ್ನ ಸೆಳೆದಿದೆ. ಅಷ್ಟಕ್ಕೂ ಸೆಹ್ವಾಗ್ ಮಾಡಿದ ಟ್ವೀಟ್ ಏನು? ಇಲ್ಲಿದೆ

ಮಧ್ಯಪ್ರದೇಶ(ಜೂನ್.13): ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬೌಂಡರಿ,ಸಿಕ್ಸರ್ ಬಾರಿಸುತ್ತಿರುವ ಟೀಮ್ಇಂಡಿಯಾ ಮಾಜಿ ಕ್ರಿಕೆಟಿಗ ಇದೀಗ ತಾವೇ ಕ್ಲೀನ್ ಬೋಲ್ಡ್ ಆಗಿದ್ದಾರೆ. ಮಧ್ಯಪ್ರದೇಶದ ಸೂಪರ್ ಮಹಿಳೆಯ ಟೈಪಿಂಗ್ ವೇಗಕ್ಕೆ ಸೆಹ್ವಾಗ್ ಮೂಕವಿಸ್ಮಿತರಾಗಿದ್ದಾರೆ.

Scroll to load tweet…

ಮಧ್ಯಪ್ರದೇಶದ ಶೇಹೋರ್‌ನಲ್ಲಿ ನೆಲೆಸಿರುವ ಈ ಅಜ್ಜಿ ಟೈಪ್ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಟೈಪಿಂಗ್ ವೇಗ ಹಾಗೂ ಕೆಲಸದ ಬಗ್ಗೆ ಇರೋ ಗೌರವ ಎಲ್ಲರಿಗೂ ಮಾದರಿಯಾಗಿದೆ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಅಜ್ಜಿ ಟೈಪಿಂಗ್ ಮಾಡುತ್ತಿರುವ ವಿಡೀಯೋವನ್ನ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕಲಿಕೆಗೆ ವಯಸ್ಸು ಮುಖ್ಯವಲ್ಲ. ಪ್ರಣಾಮಗಳು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.