ದೀಪಾವಳಿಯ ಒತ್ತಡದಲ್ಲೂ ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕೆ ಧನ್ಯವಾದಗಳು ಎಂದು ಟೇಲರ್'ಗೆ ಸೆಹ್ವಾಗ್ ಟ್ವೀಟ್ ಮಾಡಿದ್ದರು.
ನವದೆಹಲಿ(ಅ.23): ಭಾರತ ವಿರುದ್ಧ ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ.
ಲಾಥಮ್ ಭರ್ಜರಿ ಶತಕ ಹಾಗೂ ರಾಸ್ ಟೇಲರ್ ಸಮಯೋಚಿತ 95 ರನ್'ಗಳ ಬ್ಯಾಟಿಂಗ್ ನೆರವಿಂದ ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಒಂದಿಲ್ಲೊಂದು ವಿಚಾರಕ್ಕೆ ಸದಾ ಇತರ ಕ್ರಿಕೆಟಿರನ್ನು ಕಾಲೆಳೆಯುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನ್ಯೂಜಿಲೆಂಡ್ ಬ್ಯಾಟ್ಸ್'ಮನ್ ರಾಸ್ ಟೇಲರ್ ಅವರನ್ನು 'ದರ್ಜಿ' ಎಂದು ಕಾಲೆಳೆಯುವ ಮೂಲಕ ಟ್ವೀಟ್ ವಾರ್ ಆರಂಭಿಸಿದ್ದರು.
ದೀಪಾವಳಿಯ ಒತ್ತಡದಲ್ಲೂ ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕೆ ಧನ್ಯವಾದಗಳು ಎಂದು ಟೇಲರ್'ಗೆ ಸೆಹ್ವಾಗ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ರಾಸ್ ಟೇಲರ್ ಹಿಂದಿಯಲ್ಲೇ ಧನ್ಯವಾದ ಹೇಳಿ, ಮುಂದಿನ ಸರಿ ಆದಷ್ಟು ಬೇಗ ಆರ್ಡರ್ ಕೊಡಿ, ಮುಂದಿನ ದೀಪಾವಳಿ ಆರಂಭವಾಗುವುದರೊಳಗಾಗಿ ಆರ್ಡರ್ ಪೂರೈಸುವುದಾಗಿ ಸೆಹ್ವಾಗ್'ಗೆ ಟಾಂಗ್ ನೀಡಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಸೆಹ್ವಾಗ್, 'ಈ ವರ್ಷದ ಪ್ಯಾಂಟ್ ಅನ್ನೇ ಮುಂದಿನ ವರ್ಷಕ್ಕೆ ಚಿಕ್ಕದಾಗಿ ಕಟ್ ಮಾಡಿ ಕೊಡಿ ಎಂದು ತಮಾಷೆ ಮಾಡಿದ ವೀರೂ, ನಿಮ್ಮ ಹೊಲಿಗೆಗೆ ಯಾವುದೂ ಸರಿಸಾಟಿಯಿಲ್ಲ, ಅದೂ ಪ್ಯಾಂಟ್ ಆಗಿರಬಹುದು ಇಲ್ಲವೇ ಪಾರ್ಟ್'ನರ್'ಶಿಪ್ ಆಗಿರಬಹುದು' ಎಂದು ನಗೆ ಚಟಾಕಿ ಹಾರಿಸಿದ್ದಾರೆ.
