Asianet Suvarna News Asianet Suvarna News

ದೆಹಲಿ ಕ್ರಿಕೆಟ್ ಕಮಿಟಿಗೆ ವೀರೇಂದ್ರ ಸೆಹ್ವಾಗ್ ದಿಢೀರ್ ವಿದಾಯ!

ದೆಹಲಿ ಕ್ರಿಕೆಟ್ ಕಮಿಟಿಯಲ್ಲಿದ್ದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಆಕಾಶ್ ಚೋಪ್ರಾ ಹಾಗೂ ರಾಹುಲ್ ಸಂಗ್ವಿ ದಿಢೀರ್ ರಾಜಿನಾಮೆ ನೀಡಿದ್ದಾರೆ. ಸೆಹ್ವಾಗ್ ರಾಜಿನಾಮೆಗೆ ಗೌತಮ್ ಗಂಭೀರ್ ಜೊತೆಗಿನ ವೈಮನಸ್ಸು ಕಾರಣವಾಯಿತಾ? ಇಲ್ಲಿದೆ ವಿವರ.

Virender sehwag resigned from Delhi cricket committee
Author
Bengaluru, First Published Sep 17, 2018, 3:26 PM IST

ನವದೆಹಲಿ(ಸೆ.17): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ದೆಹಲಿ ಕ್ರಿಕೆಟ್ ಸಮಿತಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.  ದೆಹಲಿ ಕ್ರಿಕೆಟ್ ಹಿತೃದಷ್ಠಿಯಿಂದ ಕ್ರಿಕೆಟ್ ಸಮಿತಿಗೆ ರಾಜಿನಾಮೆ ನೀಡುತ್ತಿರುವುದಾಗಿ ಸೆಹ್ವಾಗ್ ಹೇಳಿದ್ದಾರೆ.

ದೆಹಲಿ ಕ್ರಿಕೆಟ್ ಸಮಿತಿಗೆ ಸೆಹ್ವಾಗ್ ಜೊತೆಗೆ ಆಕಾಶ್ ಚೋಪ್ರಾ ಹಾಗೂ ಸಾಹುಲ್ ಗಾಂಗ್ವಿ ಕೂಡ ದಿಢೀರ್ ರಾಜಿನಾಮೆ ನೀಡಿದ್ದಾರೆ.  ಇತ್ತೀಚೆಗೆ ಸೆಹ್ವಾಗ್ , ಚೋಪ್ರಾ ಹಾಗೂ ಸಾಂಗ್ವಿ  ದೆಹಲಿ ಕ್ರಿಕೆಟ್ ತಂಡಕ್ಕೆ ಮನೋಜ್ ಪ್ರಭಾಕರ್ ಬೌಲಿಂಗ್ ಕೋಚ್ ಆಯ್ಕೆ ಮಾಡಲು ಶಿಫಾರಸು ಮಾಡಿತ್ತು. ಆದರೆ ಇದನ್ನ ದೆಹಲಿ ಕ್ರಿಕೆಟ್ ಸಂಸ್ಥಿ ತಿರಸ್ಕರಿಸಿತು.

ದೆಹಲಿ ಕ್ರಿಕೆಟ್ ಸಂಸ್ಥೆಯ ಈ ಬೆಳೆವಣಿಗೆಯಿಂದ ಸೆಹ್ವಾಗ್ ರಾಜಿನಾಮೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ರಾಜಿನಾಮೆ ನೀಡಿದ ಬಳಿಕ ಮಾಧ್ಯಮ ಜೊತೆ ಮಾತನಾಡಿದ ಸೆಹ್ವಾಗ್, ದೆಹಲಿ ಕ್ರಿಕೆಟ್ ಕಮಿಟಿಯ ಸದಸ್ಯರಾಗಿ ನಾವು ಉತ್ತಮ ಸೇವೆ ಸಲ್ಲಿಸಲು ಶ್ರಮಿಸಿದ್ದೇವೆ. ನಮ್ಮ ಸಮಯ, ಇತಿ ಮಿತಿಗಳ ನಡುವೆಯೂ ಶ್ರದ್ಧೆಯಿಂದ ಕೆಲಸ ನಿರ್ವಹಿಸಿದ್ದೇವೆ. ಇದೀಗ ನಾವು ರಾಜಿನಾಮೆ ನೀಡಿದ್ದೇವೆ ಎಂದು ಸೆಹ್ವಾಗ್ ಹೇಳಿದ್ದಾರೆ.

ದೆಹಲಿ ಕ್ರಿಕೆಟ್ ಸಮಿತಿ ಸದಸ್ಯರಾಗಿ ಸೆಹ್ವಾಗ್ ಬೌಲಿಂಗ್ ಕೋಚ್ ಆಗಿ, ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಆಯ್ಕೆಗೆ ಕಸರತ್ತು ನಡೆಸಿದ್ದರು. ಆದರೆ ಗೌತಮ್ ಗಂಭೀರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. 2000ನೇ ಇಸವಿಯ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಮನೋಜ್ ಪ್ರಭಾಕರ್ ಹೆಸರು ಕೇಳಿಬಂದಿತ್ತು. ಹೀಗಾಗಿ ಗಂಭೀರ್ ಪ್ರಭಾಕರ್ ಆಯ್ಕೆಯನ್ನ ವಿರೋಧಿಸಿದ್ದರು

ಪ್ರಭಾಕರ್ ಆಯ್ಕೆ ವಿಚಾರದಲ್ಲಿ ಸೆಹ್ವಾಗ್ ಹಾಗೂ ಗಂಭೀರ್ ನಡುವೆ ವೈಮನಸ್ಸು ಶುರುವಾಗಿದೆ. ಇದರ ಜೊತೆಗೆ ವಿಜಯ್ ಹಜಾರೆ ಟೂರ್ನಿಗೆ ದೆಹಲಿ ಕ್ರಿಕೆಟ್ ತಂಡದ ನಾಯಕತ್ವನ್ನೂ ಗಂಭೀರ್‌ಗೆ ನೀಡಲಾಗಿದೆ. ಹೀಗಾಗಿ ಸೆಹ್ವಾಗ್ ರಾಜಿನಾಮೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

Follow Us:
Download App:
  • android
  • ios