ಹಿರಿಯ ಆಟಗಾರನಾಗಿ, ನಮ್ಮ ನಾಯಕನಾಗಿ ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಇನ್ನೂ ವಿಶೇಷವೆಂದರೆ ಅವರ ನಾಯಕತ್ವದಿಂದಲೇ ನಾನು ತಂಡಕ್ಕೆ ಕಮ್'ಬ್ಯಾಕ್ ಮಾಡಲು ಸಾಧ್ಯವಾಯಿತು.
ನವದೆಹಲಿ(ಜೂ.21): ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಅನಿಲ್ ಕುಂಬ್ಳೆ ಪರ ಇದೀಗ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಈ ನಡುವೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಇದೇ ಮೊದಲ ಬಾರಿಗೆ ಕುಂಬ್ಳೆ ರಾಜೀನಾಮೆ ಬಗ್ಗೆ ತುಟಿಬಿಚ್ಚಿದ್ದಾರೆ.
ಜಂಬೋ ಕಾಲಿಗೆ ಶೂ ತೊಡಿಸೋದು ತುಂಬ ಕಠಿಣವಾದ ಕೆಲಸವೆಂದು ವಿರೇಂದ್ರ ಸೆಹ್ವಾಗ್ ಹಾಸ್ಯ ಮಿಶ್ರಿತ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದಾರೆ. ನಾನು ಕುಂಬ್ಳೆ ಮಾರ್ಗದರ್ಶನದಲ್ಲಿ ಕ್ರಿಕೆಟ್ ಆಡಿಲ್ಲ. ಆದರೆ ಹಿರಿಯ ಆಟಗಾರನಾಗಿ, ನಮ್ಮ ನಾಯಕನಾಗಿ ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಇನ್ನೂ ವಿಶೇಷವೆಂದರೆ ಅವರ ನಾಯಕತ್ವದಿಂದಲೇ ನಾನು ತಂಡಕ್ಕೆ ಕಮ್'ಬ್ಯಾಕ್ ಮಾಡಲು ಸಾಧ್ಯವಾಯಿತು. ಕುಂಬ್ಳೆ ಮಾರ್ಗದರ್ಶನದಲ್ಲಿ ಕುಂಬ್ಳೆ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿದೆ. ಮುಂದೆ ಯಾರು ಬೇಕಾದರೂ ಕೋಚ್ ಆಗಬಹುದು, ಆದರೆ ಕುಂಬ್ಳೆ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ವೀರೂ ಅಭಿಪ್ರಾಯಪಟ್ಟಿದ್ದಾರೆ.
ಅವರನ್ನು ಕೋಚ್ ಆಗಿ ನೋಡಿಲ್ಲದಿದ್ದರೂ, ಹಿರಿಯ ಆಟಗಾರನಾಗಿ ಆತನಿಗಿಂತ ಉತ್ತಮ ಆಟಗಾರ ಮತ್ತೊಬ್ಬ ಇರಲು ಸಾಧ್ಯವಿಲ್ಲ ಎಂದು ದೆಹಲಿ ಕ್ರಿಕೆಟಿಗ ಹೇಳಿದ್ದಾರೆ.
