ಮೆದುಳು ಜ್ವರದಿಂದ ಮೃತಪಟ್ಟ ಅಮಾಯಕ ಮಕ್ಕಳ ಬಗ್ಗೆ ಸಂತಾಪ ಸೂಚಿಸಿರುವ ಸೆಹ್ವಾಗ್, ಈ ಮಹಾಮಾರಿ ಕಾಣಿಸಿಕೊಂಡು 50 ಸಾವಿರಕ್ಕೂ ಹೆಚ್ಚು ಮಕ್ಕಳು ಅಸುನೀಗಿದರೂ ಚಿಕಿತ್ಸೆ ಕಂಡುಹಿಡಿಯದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂಬರ್ಥದಲ್ಲಿ ಡೆಲ್ಲಿ ಕ್ರಿಕೆಟಿಗ ಟ್ವೀಟ್ ಮಾಡಿದ್ದಾರೆ.
ನವದೆಹಲಿ(ಆ.12): ಆಕ್ಸಿಜನ್ ಪೂರೈಕೆ ಕೊರತೆಯಿಂದ ಗೋರಖ್'ಪುರದ ಬಾಬಾ ರಾಘವ್'ದಾಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 63 ಮಕ್ಕಳು ಸಾವನಪ್ಪಿರುವ ಮನಕಲುಕುವ ಘಟನೆಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಂಬನಿ ಮಿಡಿದಿದ್ದಾರೆ.
ಮೆದುಳು ಜ್ವರದಿಂದ ಮೃತಪಟ್ಟ ಅಮಾಯಕ ಮಕ್ಕಳ ಬಗ್ಗೆ ಸಂತಾಪ ಸೂಚಿಸಿರುವ ಸೆಹ್ವಾಗ್, ಈ ಮಹಾಮಾರಿ ಕಾಣಿಸಿಕೊಂಡು 50 ಸಾವಿರಕ್ಕೂ ಹೆಚ್ಚು ಮಕ್ಕಳು ಅಸುನೀಗಿದರೂ ಚಿಕಿತ್ಸೆ ಕಂಡುಹಿಡಿಯದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂಬರ್ಥದಲ್ಲಿ ಡೆಲ್ಲಿ ಕ್ರಿಕೆಟಿಗ ಟ್ವೀಟ್ ಮಾಡಿದ್ದಾರೆ.
ಹೀಗಿದೆ ಸೆಹ್ವಾಗ್ ಮಾಡಿರುವ ಟ್ವೀಟ್...