ಟ್ವಿಟರ್ ಕಿಂಗ್ ಅಂತಲೇ ಹೆಸರುವಾಸಿಯಾಗಿರುವ ವೀರೇಂದ್ರ ಸೆಹ್ವಾಗ್ ಬಾಲಿವುಡ್ ಗೀತೆಯೊಂದನ್ನು ಉದಾಹರಣೆಯಾಗಿಟ್ಟುಕೊಂಡು ಇಬ್ಬರು ಸಹೋದರರಿಗೆ ಜಗಳ ಆಡದಂತೆ ಕಿವಿಮಾತು ಹೇಳಿದ್ದಾರೆ.
ಮುಂಬೈ(ಮೇ.14): ಪ್ರಸಕ್ತ ಐಪಿಎಲ್'ನಲ್ಲಿ ಮುಂಬೈ ಪರ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರ ನಡುವಿನ ಜಗಳಕ್ಕೆ ಟ್ವಿಟರ್ ಸಾಕ್ಷಿಯಾಗಿದೆ.
ಶನಿವಾರ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ, ‘‘ಕೆಲವೊಮ್ಮೆ ಜೀವನದಲ್ಲಿ ನಮಗೆ ಆತ್ಮೀಯರು ಎನಿಸಿಕೊಂಡವರೇ ಹೆಚ್ಚಾಗಿ ನಿರಾಸೆ ಮೂಡಿಸುತ್ತಾರೆ. ಇದು ಸರಿಯಲ್ಲ ಸಹೋದರ’’ ಎಂದು ಟ್ವೀಟ್ ಮಾಡಿದ್ದರು.
ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಕೃನಾಲ್ ಪಾಂಡ್ಯ, ‘‘ಈ ರೀತಿ ಆಗಬಾರದಿತ್ತು, ಆಗಿ ಹೋಗಿದೆ. ಇದನ್ನು ಮತ್ತಷ್ಟು ಎಳೆದಾಡುವುದು ಬೇಡ. ಜತೆಗೆ ನಾನು ನಿನಗಿಂತ ದೊಡ್ಡವನು ಅನ್ನುವುದು ಗೊತ್ತಿರಲಿ’’ ಎಂದಿದ್ದಾರೆ.
ಈ ವೇಳೆ ಟ್ವಿಟರ್ ಕಿಂಗ್ ಅಂತಲೇ ಹೆಸರುವಾಸಿಯಾಗಿರುವ ವೀರೇಂದ್ರ ಸೆಹ್ವಾಗ್ ಬಾಲಿವುಡ್ ಗೀತೆಯೊಂದನ್ನು ಉದಾಹರಣೆಯಾಗಿಟ್ಟುಕೊಂಡು ಇಬ್ಬರು ಸಹೋದರರಿಗೆ ಜಗಳ ಆಡದಂತೆ ಕಿವಿಮಾತು ಹೇಳಿದ್ದಾರೆ.
