ಒಂದೊಮ್ಮೆ ಈ ಟೆಸ್ಟ್‌'ನಲ್ಲಿ ವಿರಾಟ್ ಕೊಹ್ಲಿ ವಿಫಲಗೊಂಡರೆ, ಮುಂದಿನ ಪಂದ್ಯದಲ್ಲಿ ಹೊರಗುಳಿಯುವರೇ ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ.

ನವದೆಹಲಿ(ಜ.14): ದ.ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌'ಗೆ ಭಾರತ ತಂಡದ ಆಯ್ಕೆ ಕುರಿತು ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದೊಮ್ಮೆ ಈ ಟೆಸ್ಟ್‌'ನಲ್ಲಿ ವಿರಾಟ್ ಕೊಹ್ಲಿ ವಿಫಲಗೊಂಡರೆ, ಮುಂದಿನ ಪಂದ್ಯದಲ್ಲಿ ಹೊರಗುಳಿಯುವರೇ ಎಂದು ಸೆಹ್ವಾಗ್ ಪ್ರಶ್ನಿಸಿದ್ದಾರೆ. ‘ಕೇವಲ ಒಂದು ಟೆಸ್ಟ್‌'ನಲ್ಲಿ ವಿಫಲಗೊಂಡಿದ್ದಕ್ಕೆ ಕೊಹ್ಲಿ, ಧವನ್'ರನ್ನು ಕೈಬಿಟ್ಟಿದ್ದಾರೆ. ಭುವನೇಶ್ವರ್‌'ರನ್ನು ಕೈ ಬಿಡಲು ಕಾರಣ ಏನೆಂಬುದು ತಿಳಿಯುತ್ತಿಲ್ಲ. ಒಂದೊಮ್ಮೆ 2ನೇ ಟೆಸ್ಟ್‌'ನಲ್ಲಿ ವಿಫಲಗೊಂಡರೆ ಕೊಹ್ಲಿ, ಮುಂದಿನ ಪಂದ್ಯದಲ್ಲಿ ಬೆಂಚ್ ಕಾಯುವರೇ’ ಎಂದಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ವೃದ್ದಿಮಾನ್ ಸಾಹಾ ಬದಲಿಗೆ ಪಾರ್ಥಿವ್ ಪಟೇಲ್ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಸತತ 9 ಟೆಸ್ಟ್ ಸೀರಿಸ್ ಗೆದ್ದು ದಾಖಲೆ ಬರೆದಿರುವ ಟೀಂ ಇಂಡಿಯಾ ದಕ್ಷಿಣ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಕೇಪ್'ಟೌನ್ ಪಂದ್ಯವನ್ನು ಕೈಚೆಲ್ಲಿ 0-1ರ ಹಿನ್ನಡೆಯಲ್ಲಿದೆ.