ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳ ಮೇಲೆ ಕಿಡಿಕಾರಿದ ಸೆಹ್ವಾಗ್...!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Aug 2018, 12:07 PM IST
Virender Sehwag disappointed with India defeat
Highlights

ಭಾರತ ಕಳಪೆ ಆಟವಾಡಿದೆ. ತಂಡ ಸಂಕಷ್ಟದಲ್ಲಿದ್ದಾಗ, ನಮ್ಮವರು ಚೆನ್ನಾಗಿ ಆಡಲಿ ಎಂದು ನಾವು ಯಾವಾಗಲೂ ತಂಡದ ಬೆಂಬಲಕ್ಕೆ ಇರಲು ಪ್ರಯತ್ನಿಸುತ್ತೇವೆ. ಆದರೆ ಯಾವುದೇ ಪ್ರತಿರೋಧವಿಲ್ಲದೇ ಸೋಲೊಪ್ಪಿಕೊಂಡಿದ್ದು, ನಿಜಕ್ಕೂ ನಿರಾಸೆಯನ್ನುಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಕಳಪೆ ಪ್ರದರ್ಶನದಿಂದ ಹೊರಬಂದು ಟೀಂ ಇಂಡಿಯಾ ಆತ್ಮವಿಶ್ವಾಸದಿಂದ ಪೈಪೋಟಿ ನೀಡುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.

ನವದೆಹಲಿ[ಆ.13]: ಟೀಂ ಇಂಡಿಯಾ ಲಾರ್ಡ್ಸ್ ಟೆಸ್ಟ್’ನಲ್ಲಿ ಆಂಗ್ಲರೆದುರು ಹೀನಾಯ ಸೋಲು ಕಂಡಿದೆ. ಬ್ಯಾಟಿಂಗ್ ಮರೆತಂತೆ ಆಡಿದ ವಿರಾಟ್ ಪಡೆ, ಎರಡನೇ ಟೆಸ್ಟ್’ನಲ್ಲಿ ಇನ್ನಿಂಗ್ಸ್ ಹಾಗೂ 159 ರನ್’ಗಳ ಹೀನಾಯ ಸೋಲು ಕಂಡು ಭಾರತೀಯ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.

ಈಗಾಗಲೇ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಹಿನ್ನಡೆ ಸಾಧಿಸಿರುವ ಭಾರತ ತಂಡ 2011ರಲ್ಲಿ ಆದಂತೆ ವೈಟ್’ವಾಶ್ ಆಗಲಿದೆ ಎಂದು ಕೆಲವರು ಭವಿಷ್ಯ ನುಡಿಯಲಾರಂಭಿಸಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳ ಬೇಜವಾಬ್ದಾರಿಯುತ ಪ್ರದರ್ಶನಕ್ಕೆ ಕಿಡಿಕಾರಿದ್ದಾರೆ.

ಇದನ್ನು ಓದಿ: ಹೊಸ ವಿವಾದದಲ್ಲಿ ಸಿಲುಕಿಕೊಂಡ ವಿರೇಂದ್ರ ಸೆಹ್ವಾಗ್

ಭಾರತ ಕಳಪೆ ಆಟವಾಡಿದೆ. ತಂಡ ಸಂಕಷ್ಟದಲ್ಲಿದ್ದಾಗ, ನಮ್ಮವರು ಚೆನ್ನಾಗಿ ಆಡಲಿ ಎಂದು ನಾವು ಯಾವಾಗಲೂ ತಂಡದ ಬೆಂಬಲಕ್ಕೆ ಇರಲು ಪ್ರಯತ್ನಿಸುತ್ತೇವೆ. ಆದರೆ ಯಾವುದೇ ಪ್ರತಿರೋಧವಿಲ್ಲದೇ ಸೋಲೊಪ್ಪಿಕೊಂಡಿದ್ದು, ನಿಜಕ್ಕೂ ನಿರಾಸೆಯನ್ನುಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಕಳಪೆ ಪ್ರದರ್ಶನದಿಂದ ಹೊರಬಂದು ಟೀಂ ಇಂಡಿಯಾ ಆತ್ಮವಿಶ್ವಾಸದಿಂದ ಪೈಪೋಟಿ ನೀಡುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಲಾರ್ಡ್ಸ್ ಟೆಸ್ಟ್’ನಲ್ಲಿ ಭಾರತ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 107 ರನ್’ಗಳಿಗೆ ಸರ್ವಪತನ ಕಂಡಿತ್ತು. ಆಬಳಿಕ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್’ನಲ್ಲಿ 396 ರನ್ ಬಾರಿಸುವುದರೊಂದಿಗೆ ಬರೋಬ್ಬರಿ 289 ರನ್’ಗಳ ಮುನ್ನಡೆ ಸಾಧಿಸಿತ್ತು. ಇದಕ್ಕುತ್ತರವಾಗಿ ಭಾರತ ದ್ವಿತಿಯಾ ಇನ್ನಿಂಗ್ಸ್’ನಲ್ಲಿ ಕೇವಲ 130 ರನ್’ಗಳಿಗೆ ಇಂಗ್ಲೆಂಡ್’ಗೆ ಶರಣಾಗಿತ್ತು.    

loader