ಒಟ್ನಲ್ಲಿ ಸಾಕಷ್ಟು ಬಾರಿ ಮೈದಾನದಲ್ಲಿ ಸಚಿನ್- ಸೆಹ್ವಾಗ್ ಜುಗಲ್'ಬಂದಿ ನೋಡುತ್ತಿದ್ದ ಅಭಿಮಾನಿಗಳಿಗೀಗ ಮತ್ತೆ ಮೈದಾನದ ಹೊರಗೆ ಅವರ ತಮಾಷೆಗಳನ್ನು ನೋಡುವ ಭಾಗ್ಯ ಸಿಕ್ಕಂತಾಗಿದೆ..!
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಆಗಾಗ್ಗೆ ಸಂಚಲನ ಮೂಡಿಸುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್'ಗೆ ಇತ್ತೀಚೆಗೆ ಗಾಡ್ ಜೀ ದರ್ಶನವಾಯ್ತಂತೆ!
ಸಚಿನ್ ಜತೆಗಿರುವ ಫೋಟೋ ಒಂದನ್ನು ಟ್ವಿಟರ್‌ಗೆ ಹಾಕಿರುವ ವೀರೂ, ‘ನವದೆಹಲಿಯಲ್ಲಿ ಗಾಡ್ ಜೀ ಕೆ ದರ್ಶನ್’ (ನವದೆಹಲಿಯಲ್ಲಿ ದೇವರ ದರ್ಶನವಾಯಿತು) ಎಂದು ಟ್ವೀಟಿಸಿದ್ದರು.
ಇದನ್ನು ನೋಡಿದ ಸಚಿನ್, ‘ಅರೆ ಸೆಹ್ವಾಗ್ ತೊಡಿ ದೇರ್ ರುಕ್ ಜಾತಾ ತೊ ಯೆಹ್ ಫೋಟೋ ಯೂಸ್ ಕರಲೇತಾ (ಈಗಲೇ ಏಕೆ ಇದನ್ನು ಬಳಸಿದೆ, ಸ್ವಲ್ಪ ಸಮಯ ಬಿಡಬಾರದಿತ್ತೇ?’) ಎಂದು ತರಾಟೆಗೆ ತೆಗೆದುಕೊಂಡರಂತೆ!
ಒಟ್ನಲ್ಲಿ ಸಾಕಷ್ಟು ಬಾರಿ ಮೈದಾನದಲ್ಲಿ ಸಚಿನ್- ಸೆಹ್ವಾಗ್ ಜುಗಲ್'ಬಂದಿ ನೋಡುತ್ತಿದ್ದ ಅಭಿಮಾನಿಗಳಿಗೀಗ ಮತ್ತೆ ಮೈದಾನದ ಹೊರಗೆ ಅವರ ತಮಾಷೆಗಳನ್ನು ನೋಡುವ ಭಾಗ್ಯ ಸಿಕ್ಕಂತಾಗಿದೆ..!