2009ರ ನವೆಂಬರ್‌'ನಲ್ಲೇ ಟ್ವೀಟರ್ ಖಾತೆ ತೆರೆದಿದ್ದ ಸೆಹ್ವಾಗ್ ಆರಂಭದಲ್ಲಿ ಅಷ್ಟೇನು ಸಂಖ್ಯೆಯ ಹಿಂಬಾಲಕರನ್ನು ಹೊಂದಿರಲಿಲ್ಲ.
ನವದೆಹಲಿ(ಮೇ.24): ಕ್ರಿಕೆಟ್'ನಿಂದ ನಿವೃತ್ತಿಯಾದರೂ ಸದಾ ಒಂದಿಲ್ಲೊಂದು ಟ್ವೀಟ್ ಮೂಲಕ ಸುದ್ದಿ ಮಾಡುತ್ತಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತೊಂದು ದಾಖಲೆ ಬರೆದಿದ್ದಾರೆ.
2009ರ ನವೆಂಬರ್'ನಲ್ಲೇ ಟ್ವೀಟರ್ ಖಾತೆ ತೆರೆದಿದ್ದ ಸೆಹ್ವಾಗ್ ಆರಂಭದಲ್ಲಿ ಅಷ್ಟೇನು ಸಂಖ್ಯೆಯ ಹಿಂಬಾಲಕರನ್ನು ಹೊಂದಿರಲಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ ಬಳಿಕ ಟ್ವೀಟರ್'ನಲ್ಲಿ ಸಾಕಷ್ಟು ಸಕ್ರಿಯರಾಗಿರುವ ಸೆಹ್ವಾಗ್, ಪ್ರಚಲಿತ ಘಟನೆಗಳು, ಕ್ರಿಕೆಟ್ ತಾರೆಯರ ಹುಟ್ಟುಹಬ್ಬಗಳಿಗೆ ವಿನೂತನವಾಗಿ ಟ್ವೀಟ್ ಮಾಡುವ ಮೂಲಕ ಸಾಕಷ್ಟು ಹಿಂಬಾಲಕರನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.
10 ಮಿಲಿಯನ್ ಹಿಂಬಾಲಕರನ್ನು ಹೊಂದಿರುವುದು ಸಂತಸ ತಂದಿದೆ. ನಿಜಕ್ಕೂ ಅಭಿಮಾನಿಗಳ ಪ್ರತಿಕ್ರಿಯೆ ಅದ್ಭುತ ಎನಿಸಿದೆ ಎಂದು ಸೆಹ್ವಾಗ್ ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ 10 ಬೆರಳುಗಳನ್ನು ತೋರಿಸುವ ದೃಶ್ಯವನ್ನು ಟ್ವೀಟರ್'ನಲ್ಲಿ ಅಪ್'ಲೋಡ್ ಮಾಡಿದ್ದಾರೆ.
ಹಿಂಬಾಲಕರನ್ನು ಪಡೆದಿರುವ ಕ್ರಿಕೆಟಿಗರ ಪಟ್ಟಿಯಲ್ಲಿ ಸೆಹ್ವಾಗ್ 2ನೇ ಸ್ಥಾನ ಪಡೆದಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ 1.6 ಕೋಟಿ ಹಿಂಬಾಲಕರನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
