ನೂತನವಾಗಿ ಆಯ್ಕೆಯಾಗುವ ಕೋಚ್ 2019ರ ವಿಶ್ವಕಪ್ ಟೂರ್ನಿಯವರೆಗೂ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದ್ದು, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿ, ಬಿಸಿಸಿಐ ನೇಮಿಸಿದ ಸಲಹಾ ಸಮಿತಿಯೆದುರು ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಆನಂತರ ಸಲಹಾ ಸಮಿತಿಯ ಶಿಫಾರಸನ್ನು ಆದರಿಸಿ ಬಿಸಿಸಿಐ ಕೋಚ್ ಯಾರಾಗಬೇಕು ಎನ್ನುವುದನ್ನು ತೀರ್ಮಾನಿಸಲಿದೆ.

ನವದೆಹಲಿ(ಮೇ.28): ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಹುದ್ದೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಹೊಸದಾಗಿ ಅರ್ಜಿ ಆಹ್ವಾನಿಸಿದ್ದು, ಭಾರತದ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌'ಗೆ ಅರ್ಜಿ ಸಲ್ಲಿಸುವಂತೆ ಸ್ವತಃ ಬಿಸಿಸಿಐ ಕೇಳಿಕೊಂಡಿದೆ ಎನ್ನಲಾಗಿದೆ.

‘‘ಐಪಿಎಲ್ ವೇಳೆ ನಾವು ಸೆಹ್ವಾಗ್ ಅವರನ್ನು ಸಂಪರ್ಕಿಸಿ, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಕೇಳಿಕೊಂಡೆವು. ಆದರೆ ಅರ್ಜಿ ಸಲ್ಲಿಸುತ್ತಿರುವುದು ಅವರೊಬ್ಬರೇ ಅಲ್ಲ. ಇನ್ನಿತರ ಮಾಜಿ ಆಟಗಾರರು ಸಹ ತಮ್ಮ ಅದೃಷ್ಟ ಪರೀಕ್ಷೆಗಾಗಿ ಕಾದಿದ್ದಾರೆ’’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ 18ಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯಗೊಳ್ಳಲಿದ್ದು, ಅಂದೇ ಕುಂಬ್ಳೆ ಅವರ ಗುತ್ತಿಗೆ ಅವಧಿ ಸಹ ಅಂತ್ಯಗೊಳ್ಳಲಿದೆ. ಆ ವೇಳೆಗೆ ತಂಡಕ್ಕೆ ನೂತನ ಕೋಚ್ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.