ವಿರಾಟ್ ತಮ್ಮ ಕ್ರಿಕೆಟ್ ಬದುಕಿನಲ್ಲಿ ಅತ್ಯಂತ ಹೀನಾಯಿ ದಾಖಲೆ ಇದಾಗಿದೆ.

ಬೆಂಗಳೂರು(ಮೇ.06): ಸೋಲುಗಳ ಮೇಲೆ ಸೋಲನ್ನು ಆರ್'ಸಿಬಿ 10ನೇ ಆವೃತ್ತಿಯ ಐಪಿಎಲ್'ನಲ್ಲಿ ಅನುಭವಿಸುತ್ತಿದೆ. ಈ ಬಾರಿ 8 ಪಂದ್ಯಗಳನ್ನು ಮುನ್ನೆಡೆಸಿರುವ ನಾಯಕ ವಿರಾಟ್ ಕೊಹ್ಲಿ ಜಯಗಳಿಸಿರುವುದು ಮಾತ್ರ ಕೇವಲ ಒಂದು ಪಂದ್ಯದಲ್ಲಿ ಮಾತ್ರ. ವಿರಾಟ್ ತಮ್ಮ ಕ್ರಿಕೆಟ್ ಬದುಕಿನಲ್ಲಿ ಅತ್ಯಂತ ಹೀನಾಯಿ ದಾಖಲೆ ಇದಾಗಿದೆ.

2008ರಿಂದ ಇಲ್ಲಿಯವರೆಗೂ ಆರ್'ಸಿಬಿ ತಂಡದ ಪರ 147 ಪಂದ್ಯಗಳನ್ನು ಆಡಿರುವ ಕೊಹ್ಲಿ 72ರಲ್ಲಿ ಟೀಂ'ಗೆ ಸೋಲಾಗಿದೆ. ಐಪಿಎಲ್'ನಲ್ಲಿ ಆಟವಾಡಿರುವ ಯಾವುದೇ ಆಟಗಾರ ಇಷ್ಟು ಸೋಲನ್ನು ಅನುಭವಿಸಿಲ್ಲ. ಕೆಕೆಆರ್, ಮುಂಬೈ,ಬೆಂಗಳೂರು,ಪುಣೆ ಹಾಗೂ ಕೋಲ್ಕತ್ತಾ ತಂಡಗಳನ್ನು ಪ್ರತಿನಿಧಿಸಿರುವ ರಾಬಿನ್ ಉತ್ತಪ್ಪಗೆ ಮಾತ್ರ ಅತೀ ಹೆಚ್ಚು ಸೋಲಾಗಿದೆ. ಇವರು ಆಡಿರುವ 145 ಪಂದ್ಯಗಳಲ್ಲಿ ತಂಡ 75 ಪಂದ್ಯಗಳಲ್ಲಿ ಸೋತಿದೆ. ತಂಡಗಳ ಬಗ್ಗೆ ಹೇಳುವುದಾದರೆ ಅತೀ ಹೆಚ್ಚು ಸೋಲು ಕಂಡಿರುವುದು ಡೆಲ್ಲಿ. 10 ಆವೃತ್ತಿಗಳಲ್ಲಿ 146 ಪಂದ್ಯಗಳಿಂದ 81ರಲ್ಲಿ ಸೋಲುಂಟಾಗಿದೆ.