ರಾಯಲ್ಸ್ ಚಾಲೆಂಜರ್ಸ್ ಆಪ್ ಬೆಂಗಳೂರು ಈ ಆವೃತ್ತಿಯ 14 ಪಂದ್ಯಗಳಲ್ಲಿ 8 ರಲ್ಲಿ ಸೋತು 6 ರಲ್ಲಿ ಮಾತ್ರ ಗೆಲುವು ಸಾಧಿಸಿ ಪ್ಲೇಆಫ್'ನಿಂದ ನಿರ್ಗಮಿಸಿತ್ತು. ಮೇ.25 ಕ್ಲಾಲಿಫೈಯರ್ 2ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ.
ಮುಂಬೈ(ಮೇ.24): ಹೀನಾಯ ಪ್ರದರ್ಶನ ನೀಡಿದ ರಾಯಲ್ಸ್ ಚಾಲೆಂಜರ್ಸ್ ಆಪ್ ಬೆಂಗಳೂರು 11ನೇ ಆವೃತ್ತಿಯ ಪ್ಲೇಆಪ್ ಹಂತ ಪ್ರವೇಶಿಸದಿರುವ ಬಗ್ಗೆ ತುಟಿ ಬಿಚ್ಚಿದ್ದಾರೆ. ಟ್ವಿಟರ್'ನಲ್ಲಿ ಪೋಸ್ಟ್ ಮಾಡಿರುವ ಅವರು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಾಗಿ ತಿಳಿಸಿದ್ದಾರೆ.
'ಒಂದು ನೀನು ಗೆಲುವು ಸಾಧಿಸು ಅಥವಾ ಪಾಠ ಕಲಿ' ಎಂಬ ತತ್ತ್ವದಲ್ಲಿ ನಿಜವಾಗಲು ನಂಬಿಕೆಯಿಟ್ಟಿದ್ದೇನೆ. ಈ ಸಲ ನಮ್ಮ ಕಡೆಯಿಂದ ಆದ ತಪ್ಪುಗಳನ್ನು ತದ್ದಿಕೊಂಡು ಮುಂದಿನ ಆವೃತ್ತಿಯಲ್ಲಿ ಖಂಡಿತವಾಗಿ ಟ್ರೋಫಿ ಗೆಲ್ಲಲು ಸಾಧ್ಯವಾದಷ್ಟು ಕಠಿಣ ಪ್ರಯತ್ನ ನಡೆಸುತ್ತೇವೆ' ಎಂದು ತಿಳಿಸಿದ್ದಾರೆ.
ರಾಯಲ್ಸ್ ಚಾಲೆಂಜರ್ಸ್ ಆಪ್ ಬೆಂಗಳೂರು ಈ ಆವೃತ್ತಿಯ 14 ಪಂದ್ಯಗಳಲ್ಲಿ 8 ರಲ್ಲಿ ಸೋತು 6 ರಲ್ಲಿ ಮಾತ್ರ ಗೆಲುವು ಸಾಧಿಸಿ ಪ್ಲೇಆಫ್'ನಿಂದ ನಿರ್ಗಮಿಸಿತ್ತು. ಮೇ.25 ಕ್ಲಾಲಿಫೈಯರ್ 2ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ. ಇವೆರಡು ತಂಡಗಳಲ್ಲಿ ಗೆಲುವು ಸಾಧಿಸಿದ ತಂಡ ಮೇ.27 ರಂದು ಮುಂಬೈ'ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ.
