ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಪ್ರೀತಿ ಅನುಷ್ಕಾ ಶರ್ಮಾ ಅಲ್ಲ. ಹಾಗಂತ ನಾವ್ ಹೇಳ್ತಿಲ್ಲ ಸ್ವತಃ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಹಾಗೇ ಟೀಮ್ ಇಂಡಿಯಾ ನಿಗದಿತ ಓವರ್'ಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮೊದಲ ಪ್ರೀತಿ ಸಾಕ್ಷಿ ಸಿಂಗ್ ರಾವತ್ ಅಲ್ಲ.
ವಿರಾಟ್ ಕೊಹ್ಲಿ ಮೊದಲ ಲವ್ ಬ್ರುನೋ
ಹೌದು ವಿರಾಟ್ ಕೊಹ್ಲಿ ತುಂಬಾ ಇಷ್ಟ ಪಡೋದು ಅವರ ಮನೆಯಲ್ಲಿ ಸಾಕಿರುವ ಮುದ್ದಾದ ನಾಯಿ ಬ್ರುನೋ. ವಿರಾಟ್ ಹೆಚ್ಚು ಮನೆಯಲ್ಲಿ ಇರಲು ಇಷ್ಟ ಪಡುತ್ತಾರೆ. ವಿರಾಟ್'ಗೆ ಮನೆಯಲ್ಲಿ ಸದಾ ಸಾಥ್ ನಿಡೋದು ಪುಟ್ಟ ನಾಯಿ ಬ್ರುನೋ. ಹಾಗಾಗಿ ಕೊಹ್ಲಿ ತಮ್ಮ ಹೆಚ್ಚಿನ ಸಮಯವನ್ನು ಇದನ್ನು ಮುದ್ದಿಸುವದರಲ್ಲೆ ಕಳೆಯುತ್ತಾರೆ.
ಬ್ರುನೋ ಎಂದರೆ ಕೊಹ್ಲಿ ಪ್ರಾಣ
ಹೌದು ವಿರಾಟ್ ತಮ್ಮ ನಾಯಿಯನ್ನು ಯಾವ ಹಂತಕ್ಕೆ ಪ್ರೀತಿಸುತ್ತಾರೆಂದರೆ. ಅವರು ಮಲಗಿಕೊಳ್ಳೋದು ಕೂಡ ಬ್ರುನೋ ಜೊತೆಯಲ್ಲಿ. ವಿರಾಟ್ ಜಿಮ್ ಮಾಡಿದ್ರು. ಬ್ರುನೋ ಅವರ ವರ್ಕೌಟ್ ಮಾಡುವುದನ್ನು ನೋಡುತ್ತ ಕುಳಿತಿರುತ್ತದೆ. ವಿರಾಟ್ ಮನೆಯಲ್ಲಿರುವ ತನಕ ಬ್ರುನೋ ಜೊತೆಗೆ ಟೈಂ ಪಾಸ್ ಮಾಡುತ್ತಾರೆ. ಬ್ರುನೋ ಕೂಡ ಅಷ್ಟೆ ಕೊಹ್ಲಿ ಇದ್ದರೆ ಅವರನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ.
ವಿರಾಟ್ ಕೊಹ್ಲಿಗೆ ಚಿಕ್ಕ ವಯಸ್ಸಿನಿಂದಲೂ ನಾಯಿಗಳೆಂದರೆ ಪಂಚಪ್ರಾಣವಂತೆ. ಹಾಗಾಗಿ ಅವರು, ಬೀದಿಯಲ್ಲಿರುವ ಸಣ್ಣ ನಾಯಿಮರಿಗಳನ್ನು ತಂದು ಸಾಕುವುದರ ಜೊತೆಗೆ ಅದರ ಹಾರೈಕೆ ಕೂಡ ಅಷ್ಟೆ ಅಕ್ಕರೆಯಿಂದ ಮಾಡುತ್ತಿದ್ರು. ಕಳೆದ ಐದು ವರ್ಷದಿಂದ ಬ್ರುನೋ ಸಾಕಿಕೊಂಡಿರುವ ವಿರಾಟ್ ಮನೆಯಲ್ಲಿ ಬ್ರುನೋ ಅವರ ಅಚ್ಚುಮೆಚ್ಚಿನ ಸದಸ್ಯನ್ನಾಗಿದೆ.
ಮನೆ ತುಂಬ ನಾಯಿ ಸಾಕಿರುವ ಧೋನಿ
ಮಹೇಂದ್ರ ಸಿಂಗ್ ಧೋನಿ ಅವರ ಮನೆಯಲ್ಲಿ ಮನುಷ್ಯರಿಗಿಂತ ಹೆಚ್ಚು ನಾಯಿಗಳಿವೆ. ಬಾಲ್ಯದಿಂದಲೂ ಮಹಿಗೆ ಅದೇನೋ ಪ್ರಾಣಿಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ನಾಯಿಗಳೆಂದರೆ ಧೋನಿ ಹೆಚ್ಚಿನ ಪ್ರೀತಿ ತೋರಿಸುತ್ತಾರೆ. ಧೋನಿ ಮನೆಯಲ್ಲಿ ಹಲವು ಬೀದಿ ನಾಯಿಗಳನ್ನು ಸಾಕಿದ್ದಾರೆ. ಯಾಕೆಂದರೆ ಮಹಿ ಪತ್ನಿ ಸಾಕ್ಷಿ ಕೂಡ ನಾಯಿ ಪ್ರೇಮಿ.
ನಾಯಿಗಳನ್ನು ಪ್ರೀತಿಸುವ ಸಾಕ್ಷಿ ಸಿಂಗ್
ಮಹೇಂದ್ರ ಸಿಂಗ್ ಧೋನಿ ಪತ್ನಿ ಕೂಡ ನಾಯಿ ಪ್ರೇಮಿ. ಹೌದು ರಸ್ತೆಯಲ್ಲಿ ಕಾಣುವ ಅವರಿಗಿಷ್ಟವಾಗುವ ನಾಯಿಗಳನ್ನು ತಂದು ಸಾಕುವ ಹವ್ಯಾಸವನ್ನು ಸಾಕ್ಷಿ ರೂಡಿಸಿಕೊಂಡಿದ್ದಾರೆ. ಗಂಡ ಹೆಂಡತಿ ಇಬ್ಬರು ಮನೆ ತುಂಬಾ ಎಲ್ಲ ರೀತಿಯ ನಾಯಿಗಳನ್ನು ಸಾಕಿದ್ದಾರೆ. ಸಾಕ್ಷಿ ಒಂದು ಹೆಜ್ಜೆ ಮುಂದೆ ಹೋಗಿ ಬೀದಿ ನಾಯಿಗಳನ್ನು ಸಾಕಿ ಅವುಗಳಿಗೆ ಉತ್ತಮ ಬದುಕನ್ನು ನೀಡಿ ಎಂದು ಮನವಿ ಕೂಡ ಮಾಡಿಕೊಂಡಿದ್ದಾರೆ. ಬೀದಿಗಳನ್ನು ಸಾಕಿ ಎನ್ನುವುದು ಸಾಕ್ಷಿ ಕಳಕಳಿಯಾಗಿದೆ.
ಶ್ವಾನಗಳ ಮುಂದೆ ಕರಗುವ ಮಹಿ
ಮಹೇಂದ್ರ ಸಿಂಗ್ ಧೋನಿ ತುಂಬಾ ರಿಸರ್ವ್ ಮನುಷ್ಯ. ಅವರು ಯಾವಗಲೂ ಅಷ್ಟಾಗಿ ಜನರೊಂದಿಗೆ ಬೆರೆಯುವುದಿಲ್ಲ, ಜಾಸ್ತಿ ಯಾರನ್ನು ಮಾತನಾಡಿಸುವುದಿಲ್ಲ. ಆದರೆ ಮಹಿ ನಾಯಿಗಳನ್ನು ಕಂಡರೆ ಮಾತ್ರ ಎಲ್ಲೆ ಇದ್ರೂ ಅದರ ಹತ್ತಿರ ಬಂದು ಅದರ ಜೊತೆ ಆಟವಾಡುತ್ತಾರೆ. ಪೋಲೀಸರ ನಾಯಿಗಳೆಂದರೆ ಮಹಿಗೆ ಹೆಚ್ಚು ಇಷ್ಟ. ಅವುಗಳು ಎಷ್ಟೆ ಭಯಾನಕವಾಗಿದ್ರು ಮಹಿ ಮುಂದೆ ಬಾಲ ಆಲಗಾಡಿಸುತ್ತವೆ. ಮಹಿ ಕೂಡ ಅಷ್ಟೆ ಮೈದಾನದಲ್ಲಿ ಅಚಾನಕ್ಕಾಗಿ ಬಂದ ಬೀದಿ ನಾಯಿಗಳನ್ನು ತುಂಬಾ ಅಕ್ಕರೆಯಿಂದ ಕರೆದುಕೊಂಡು ಹೋಗಿ ಹೊರಗಡೆ ಬಿಟ್ಟು ಬರ್ತಾರೆ. ಅವುಗಳೊಂದಿಗೆ ಅಷ್ಟೆ ಪ್ರೀತಿಯಿಂದಲೇ ವರ್ತಿಸುತ್ತಾರೆ.
ಇವರಷ್ಟೆ ಅಲ್ಲ ಟೀಮ್ ಇಂಡಿಯಾದಲ್ಲಿರುವ ಹಲವು ಆಟಗಾರರು ನಾಯಿಗಳನ್ನು ಪ್ರೀತಿಸುತ್ತಾರೆ. ಆದರೆ ರವಿಂದ್ರ ಜಡೇಜಾಗೆ ಕುದರೆ ಎಂದರೆ ಹೆಚ್ಚು ಇಷ್ಟ. ಕ್ರಿಕೆಟರ್ಸ್ಗಳ ಈ ರೀತಿಯ ಪ್ರಾಣಿ ಪ್ರೀತಿ, ಹಲವು ಕ್ರಿಕೆಟ್ ಅಭಿಮಾನಿಗಳಿಗೂ ಸ್ಫೂರ್ತಿಯಾಗಿದೆ.
