ಭಾನುವಾರ ಸಂಜೆ ಸೆಹ್ವಾಗ್ ಮಾಡಿರುವ ಟ್ವೀಟ್ ಅಂತೂ ವಿರಾಟ್ ಕೊಹ್ಲಿ ಅಭಿಮಾನಿಗಳ ಹೃದಯ ಬಡಿತವನ್ನೇ ನಿಲ್ಲುವಂತೆ ಮಾಡಿಬಿಟ್ಟಿತ್ತು.
ನವದೆಹಲಿ(ಮಾ.06): ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾಡುವ ಟ್ವೀಟ್'ಗಳು ಒಂದಕ್ಕಿಂತ ಒಂದು ವಿಚಿತ್ರವಾಗಿರುತ್ತವೆ. ಅದರಲ್ಲೂ ಭಾನುವಾರ ಸಂಜೆ ಸೆಹ್ವಾಗ್ ಮಾಡಿರುವ ಟ್ವೀಟ್ ಅಂತೂ ವಿರಾಟ್ ಕೊಹ್ಲಿ ಅಭಿಮಾನಿಗಳ ಹೃದಯ ಬಡಿತವನ್ನೇ ನಿಲ್ಲುವಂತೆ ಮಾಡಿಬಿಟ್ಟಿತ್ತು.
ಸೆಹ್ವಾಗ್ ಟ್ವೀಟ್ ನೋಡಿ ಸಾಕಷ್ಟು ಮಂದಿ, ಆಸ್ಟ್ರೇಲಿಯಾ ವಿರುದ್ಧ ಮೊದಲೆರಡು ಟೆಸ್ಟ್'ನಲ್ಲಿ ತೀವ್ರ ನಿರಾಸೆ ಮೂಡಿಸಿರುವ ವಿರಾಟ್ ನಾಯಕತ್ವದಿಂದ ಕೆಳಗಿಳಿದು ಬಿಡುತ್ತಾರೆ ಅಂದುಕೊಂಡು ಬಿಟ್ಟರು.
ಆದರೆ ಸೆಹ್ವಾಗ್ ಮಾಡಿದ ಟ್ವೀಟ್ ವಿಷಯವೇನಪ್ಪಾ ಅಂದ್ರೆ, 'ವಿರಾಟ್ ನಿವೃತ್ತಿಯಾಗಲಿದೆ. ಹಳೆಯ ಹಡಗು ಯಾವತ್ತೂ ಸಾಯುವುದಿಲ್ಲ. ಅದರ ಸ್ಪೋರ್ತಿ ಯಾವಾಗಲೂ ಇರಲಿದೆ. ಭಾರತ ಜಲ ಸೇನೆಗೆ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದ #INS Viraat ಸೋಮವಾರದಂದು ಸೇವೆಯನ್ನು ಸ್ಥಗಿತಗೊಳಿಸಿದೆ. ಎಂದಿದ್ದರು.
ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನವನ್ನೇ ಮೂಡಿಸಿಬಿಟ್ಟಿತ್ತು.
